ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಿರ್ಮಾಪಕ ಶಂಕರೇಗೌಡ ಬಳಿಯಿಂದ ಸಾಕಷ್ಟು ಮಾಹಿತಿ ಪಡೆದುಕೊಂಡಿರುವ ಪೊಲೀಸರು ಈಗ ಎರಡನೇ ಅಧ್ಯಾಯಕ್ಕೆ ಸಿದ್ಧತೆ ನಡೆಸಿದ್ದಾರೆ.
ಶಂಕರೇಗೌಡ ನೀಡಿದ ಮಾಹಿತಿಯಂತೆ ಇನ್ನಷ್ಟು ನಟ-ನಟಿಯರಿಗೆ ಡ್ರಗ್ ಕೇಸ್ ಉರುಳಾಗುವ ಸಾಧ್ಯತೆಯಿದೆ. ತಮ್ಮ ನಾಲ್ಕಂತಸ್ತಿನ ಮನೆಯಲ್ಲಿ ಶಂಕರೇಗೌಡ ಪಾರ್ಟಿ ಆಯೋಜಿಸುತ್ತಿದ್ದರು. ಈ ಪಾರ್ಟಿಗೆ ರಾಗಿಣಿ, ಸಂಜನಾ ಸೇರಿದಂತೆ ಸ್ಯಾಂಡಲ್ ವುಡ್, ತಮಿಳು, ತೆಲುಗು ನಟ-ನಟಿಯರೂ ಆಗಮಿಸುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಬಂಧಿತರಾದ ಬಿಗ್ ಬಾಸ್ ಸ್ಪರ್ಧಿ ಮಸ್ತಾನ್ ಕೂಡಾ ಹಲವು ಹೆಸರುಗಳನ್ನು ಹೇಳಿದ್ದಾರೆ. ಹೀಗಾಗಿ ಪೊಲೀಸರು ಎಲ್ಲಾ ಪ್ರತಿಷ್ಠಿತರ ಪಟ್ಟಿಯೇ ತಯಾರಿಸಿದ್ದು, ಸದ್ಯದಲ್ಲೇ ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗುತ್ತದೆ.