ರಾಬರ್ಟ್ ಬಿಡುಗಡೆ ದಿನಾಂಕ ವದಂತಿ: ನಿರ್ಮಾಪಕರು ಹೇಳಿದ್ದೇನು?

ಬುಧವಾರ, 21 ಅಕ್ಟೋಬರ್ 2020 (09:46 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಡಿಸೆಂಬರ್ 25 ಕ್ಕೆ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ನಿರ್ಮಾಪಕ ಉಮಾಪತಿ ಗೌಡ ಸ್ಪಷ್ಟನೆ ನೀಡಿದ್ದಾರೆ.


ಸಿನಿಮಾ ನೋಡಲು ಜನ ಥಿಯೇಟರ್ ಗೆ ಭಯವಿಲ್ಲದೇ ಬರುವವರೆಗೂ ಬಿಡುಗಡೆಯಿಲ್ಲ. ಅವಸರದಲ್ಲಿ ಚಿತ್ರ ಬಿಡುಗಡೆ ಮಾಡಲ್ಲ ಎಂದು ಉಮಾಪತಿ ಗೌಡ ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಚಿತ್ರಮಂದಿರ ತೆರೆದರೂ ಶೇ. 50 ಪ್ರೇಕ್ಷಕರ ಹಾಜರಾತಿಯೊಂದಿಗೆ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಜನ ಭಯವಿಲ್ಲದೇ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುವ ಹಾಗಾಗದೇ ಚಿತ್ರ ಬಿಡುಗಡೆ ಮಾಡಿದರೆ ನಾವು ಮಾಡಿದ ಶ್ರಮಕ್ಕೆ ಬೆಲೆಯಿಲ್ಲದಂತಾಗುತ್ತದೆ ಎಂದು ಉಮಾಪತಿ ಗೌಡ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ