ಪುನೀತ್ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ರಾಕಿಂಗ್ ಸ್ಟಾರ್ ಯಶ್! ಕಾರಣವೇನು ಗೊತ್ತಾ?!
ಸೋಮವಾರ, 7 ಜನವರಿ 2019 (09:24 IST)
ಬೆಂಗಳೂರು: ಐಟಿ ದಾಳಿ ಹಿನ್ನಲೆಯಲ್ಲಿ ಎರಡು ದಿನ ಅಕ್ಷರಶಃ ಗೃಹಬಂಧನದಲ್ಲಿದ್ದ ರಾಕಿಂಗ್ ಸ್ಟಾರ್ ಯಶ್, ಅದಾದ ಬಳಿಕ ತಮ್ಮ ಪತ್ನಿ, ಮಗುವನ್ನು ನೋಡಲು ಓಡೋಡಿ ಹೋಗಿದ್ದರು.
ಇದೆಲ್ಲಾ ಗಡಿಬಿಡಿ ನಡುವೆ ಅವರಿಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ನಟಸಾರ್ವಭೌಮ ಚಿತ್ರದ ಅಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಬಳಿ ಸಾರಿ ಕೇಳಿದ್ದಾರೆ.
‘ಅನಿವಾರ್ಯ ಕಾರಣಗಳ ಹಿನ್ನಲೆಯಲ್ಲಿ ವಿಮಾನ ಕೈ ತಪ್ಪಿದ್ದರಿಂದ ಹುಬ್ಬಳ್ಳಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟ ಸಾರ್ವಭೌಮ ಚಿತ್ರದ ಅಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.
ನನ್ನ ಮೇಲೆ ಅಪಾರ ಪ್ರೀತ್ಯಾದರಗಳನ್ನು ಹೊಂದಿದ ಹುಬ್ಬಳ್ಳಿ ಭಾಗದ ಅಭಿಮಾನಿಗಳ ಕ್ಷಮೆ ಕೋರುತ್ತಿದ್ದೇನೆ. ಪವರ್ ಸ್ಟಾರ್ ಅಪ್ಪುರವರು, ಸಹೃದಯಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ರವರು, ಸಹೋದರ ಪವನ್ ಒಡೆಯರ್ ರವರು, ಛಾಯಾಗ್ರಾಹಕ ವೈದಿ ಸೇರಿದಂತೆ ಇಡೀ ನಟಸಾರ್ವಭೌಮ ತಂಡಕ್ಕೆ ಶುಭ ಕೋರುತ್ತೇನೆ. ಅಪ್ಪುರವರ ಮೇಲಿನ ನಿಮ್ಮ ಪ್ರೀತಿ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಲಿ’ ಎಂದು ಯಶ್ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ