ಈ ಸೀರಿಯಲ್ ನಲ್ಲಿ ಇಬ್ಬರಿಗೂ ಕೆಲವೇ ಕೆಲವು ಸ್ನೇಹಿತರಿದ್ದಾರೆ. ವಿಶೇಷವೆಂದರೆ ಇವರೊಂದಿಗೆ ಯಶ್ ದಂಪತಿ ಇಂದಿಗೂ ಅದೇ ಸ್ನೇಹ ಸಂಬಂಧ ಇಟ್ಟುಕೊಂಡಿದ್ದಾರೆ. ಯಶ್ ಈಗ ನ್ಯಾಷನಲ್ ಸ್ಟಾರ್. ಖ್ಯಾತ ನಾಮರೆಲ್ಲರೂ ಅವರ ಜೊತೆಗೆ ಸ್ನೇಹ ಸಂಪಾದಿಸುವುದಕ್ಕೆ ಹಾತೊರೆಯುತ್ತಿದ್ದಾರೆ. ಹಾಗಿದ್ದರೂ ಯಶ್ ದಂಪತಿ ಮಾತ್ರ ಈಗಲೂ ಅವರೊಂದಿಗೆ ಸಮಯ ಸಿಕ್ಕಾಗೆಲೆಲ್ಲಾ ಒಟ್ಟಿಗೆ ಕಾಲ ಕಳೆಯುತ್ತಾರೆ. ಯಶ್ ಮನೆಯಲ್ಲಿ ಏನೇ ಸಂಭ್ರಮವಿದ್ದರೂ ಯಾರು ಇರ್ತಾರೋ ಇಲ್ವೋ ಈ ಸ್ನೇಹಿತರು ಮಾತ್ರ ಇದ್ದೇ ಇರುತ್ತಾರೆ. ಯಶ್ ಈಗಲೂ ಹಳೇ ಸ್ನೇಹಿತರ ಜೊತೆಗೆ ಪಾರ್ಟಿಯನ್ನೂ ಮಾಡುತ್ತಾರೆ, ಪತ್ನಿ ಜೊತೆ ಸಮಯ ಸಿಕ್ಕಾಗ ಚಿಕ್ಕ ಕಿರಾಣಿ ಅಂಗಡಿಗೆ ಹೋಗಿ ಬೇಕಾಗಿದ್ದು ಕೊಂಡು ತಿನ್ನುವ ಸರಳತೆಯೂ ಅವರಲ್ಲಿದೆ.