ನಟ ಅನಂತ್ ನಾಗ್ ಗೆ ಪದ್ಮ ಪ್ರಶಸ್ತಿ: ಬೆಂಬಲಿಸಿದ ರಾಕಿಂಗ್ ಸ್ಟಾರ್ ಯಶ್

ಬುಧವಾರ, 21 ಜುಲೈ 2021 (11:39 IST)
ಬೆಂಗಳೂರು: ಹಿರಿಯ ನಟ ಅನಂತ್ ನಾಗ್ ರನ್ನು ಈ ಸಾಲಿನ ಪದ್ಮ ಪ್ರಶಸ್ತಿಗೆ ಪರಿಗಣಿಸಬೇಕೆಂಬ ಅಭಿಯಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡಾ ಬೆಂಬಲ ಸೂಚಿಸಿದ್ದಾರೆ.


ಅನಂತ್ ನಾಗ್ ಗೆ ಪದ್ಮಪ್ರಶಸ್ತಿ ಸಿಗಬೇಕೆಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು. ಇದಕ್ಕೆ ಹಲವು ನಟ-ನಟಿಯರು, ಫ್ಯಾನ್ಸ್ ಬೆಂಬಲ ಸೂಚಿಸಿದ್ದರು.

ಇದೀಗ ಅನಂತ್ ನಾಗ್ ಜೊತೆ ಕೆಜಿಎಫ್ 1 ಸೇರಿದಂತೆ ಒಟ್ಟಾಗಿ ನಟಿಸಿದ್ದ ರಾಕಿಂಗ್ ಸ್ಟಾರ್ ಯಶ್ ಕೂಡಾ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ. ಅವರು ಮಾಡಿದ ಸಾಧನೆಗಳು, ಅವರ ಜೊತೆಗೆ ಕಳೆದ ಅನುಭವಗಳನ್ನು ಹಂಚಿಕೊಂಡಿರುವ ಯಶ್, ಅವರಿಗಿಂತ ಪದ್ಮ ಪ್ರಶಸ್ತಿಗೆ ಸೂಕ್ತವಾದ ವ್ಯಕ್ತಿ ಇನ್ನೊಬ್ಬರಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ