ದರ್ಶನ್ ಬೆಂಬಲಿಸಿದ ಯುವ ನಟ ಧನ್ವೀರ್, ಅಭಿಷೇಕ್ ಅಂಬರೀಶ್
ಅಭಿಷೇಕ್ ಅಂಬರೀಶ್ ದರ್ಶನ್ ಜೊತೆಗಿರುವ ಫೋಟೋ ಜೊತೆಗೆ ಇಮೋಜಿ ಪ್ರಕಟಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಧನ್ವೀರ್ ಗೌಡ ಸುದೀರ್ಘ ಪೋಸ್ಟ್ ಮೂಲಕ ದರ್ಶನ್ ಗೆ ಬೆಂಬಲ ಸೂಚಿಸಿದ್ದಾರೆ.
ಯಾರು ಏನೇ ಹೇಳಿದರೂ ಯುವ ಕಲಾವಿದರ ಬೆನ್ನುಲುಬಾಗಿ ನಿಲ್ಲುವ ದರ್ಶನ್ ಸರ್ ಗೆ ನನ್ನ ಬೆಂಬಲವಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಇನ್ನು, ನಟ ಪ್ರಜ್ವಲ್ ದೇವರಾಜ್ ಕೂಡಾ ದರ್ಶನ್ ಜೊತೆಗಿನ ಫೋಟೋ ಪ್ರಕಟಿಸಿ, ನಾವು ಯಾವತ್ತೂ ನಿಮ್ಮೊಂದಿಗದ್ದೇವೆ ಎಂದು ಬರೆದುಕೊಂಡಿದ್ದಾರೆ.