ಈ ಲಕ್ಕಿ ದಿನದಂದೇ ಟಾಕ್ಸಿಕ್ ಶೂಟಿಂಗ್ ಆರಂಭಿಸಲಿದ್ದಾರೆ ರಾಕಿಂಗ್ ಸ್ಟಾರ್ ಯಶ್

Krishnaveni K

ಬುಧವಾರ, 7 ಆಗಸ್ಟ್ 2024 (11:15 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾ ಯಾವಾಗ ಶುರುವಾಗುತ್ತದೆ ಎಂದು ಕಾದಿದ್ದವರಿಗೆ ಈಗ ಶುಭ ಸುದ್ದಿ ಸಿಕ್ಕಿದೆ. ಟಾಕ್ಸಿಕ್ ಸಿನಿಮಾ ಶೂಟಿಂಗ್ ಆರಂಭಕ್ಕೆ ಸಮಯ ನಿಗದಿಯಾಗಿದೆ.

ಎಲ್ಲಾ ಸರಿ ಹೋಗಿದ್ದರೆ ಏಪ್ರಿಲ್ ನಿಂದಲೇ ಟಾಕ್ಸಿಕ್ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎನ್ನುವ ಸುದ್ದಿಯಿತ್ತು. ಆದರೆ ಇನ್ನೂ ಪ್ರಿ ಪ್ರೊಡಕ್ಷನ್ ಕೆಲಸಗಳು ಬಾಕಿಯಿದ್ದಿದ್ದರಿಂದ ಶೂಟಿಂಗ್ ತಡವಾಗಿದೆ. ಶೂಟಿಂಗ್ ಗಾಗಿ ಕಾದು ಕೂತಿದ್ದ ಫ್ಯಾನ್ಸ್ ಗಳೇ ಬೇಸರ ಹೊರಹಾಕಲು ಶುರು ಮಾಡಿದ್ದರು.

ಇದೀಗ ಕೊನೆಗೂ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಮೂಲಗಳ ಪ್ರಕಾರ ಆಗಸ್ಟ್ 8 ರಿಂದ ಟಾಕ್ಸಿಕ್ ಶೂಟಿಂಗ್ ಆರಂಭವಾಗಲಿದೆ ಎನ್ನಲಾಗಿದೆ. 8 ಎಂದರೆ ಯಶ್ ಗೆ ಲಕ್ಕಿ ದಿನಾಂಕ. ಜನವರಿ 8 ರಂದು ಅವರ ಹುಟ್ಟುಹಬ್ಬ. ಹೀಗಾಗಿ ಅವರ ಅದೃಷ್ಟದ ದಿನದಂದೇ ಶೂಟಿಂಗ್ ಆರಂಭವಾಗಲಿದೆ.

ಇದಕ್ಕೆ ಪೂರ್ವಭಾವಿಯಾಗಿ ಯಶ್ ನಿನ್ನೆ ಧರ್ಮಸ್ಥಳ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ತಮ್ಮ ಜೀವನದ ಎಲ್ಲಾ ವಿಶೇಷ ಗಳಿಗೆಗಳ ಸಂದರ್ಭದಲ್ಲಿ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಟಾಕ್ಸಿಕ್ ಬಗ್ಗೆ ಸದ್ಯದಲ್ಲೇ ಗುಡ್ ನ್ಯೂಸ್ ಸಿಗಲಿದೆ ಎಂದು ಫ್ಯಾನ್ಸ್ ಲೆಕ್ಕಾಚಾರ ಹಾಕಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ