ನಾಳೆ ನನ್ನ ಬರ್ತ್ ಡೇ ಆಚರಿಸ್ಬೇಡಿ ಎಂದ ರಾಕಿಂಗ್ ಸ್ಟಾರ್ ಯಶ್: ಕಾರಣ ಕೇಳಿದ್ರೆ ಶಾಕ್!
ಸೋಮವಾರ, 7 ಜನವರಿ 2019 (11:14 IST)
ಬೆಂಗಳೂರು: ಕೆಜಿಎಫ್ ಯಶಸ್ಸಿನಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್ ಯಶ್ ಗೆ ನಾಳೆ ಜನ್ಮ ದಿನದ ಸಂಭ್ರಮ. ಆದರೆ ಯಾವುದೇ ಕಾರಣಕ್ಕೂ ನಾಳೆ ನಮ್ಮ ಮನೆಗೆ ಬಂದು, ಬರ್ತ್ ಡೇ ಆಚರಿಸ್ಬೇಡಿ ಎಂದು ಯಶ್ ಮನವಿ ಮಾಡಿದ್ದಾರೆ.
ಫೇಸ್ ಬುಕ್ ಮುಖಾಂತರ ಯಶ್ ಅಭಿಮಾನಿಗಳಿಗೆ ವಿಡಿಯೋ ಸಂದೇಶ ನೀಡಿದ್ದು, ಈ ವರ್ಷ ನನಗೆ ಬರ್ತ್ ಡೇ ಆಚರಿಸಿಕೊಳ್ಳಲು ಇಷ್ಟವಿಲ್ಲ. ನೀವೂ ನನ್ನ ಬರ್ತ್ ಡೇ ಆಚರಿಸಬೇಡಿ. ನಾನು ಈ ಬಾರಿ ಯಾರನ್ನೂ ಭೇಟಿಯಾಗಲ್ಲ. ಬೇಜಾರು ಮಾಡ್ಕೊಳ್ಬೇಡಿ ಎಂದು ಮನವಿ ಮಾಡಿದ್ದಾರೆ.
ಅದಕ್ಕೆ ಕಾರಣ ರೆಬಲ್ ಸ್ಟಾರ್ ಅಂಬರೀಶ್. ಅಂಬರೀಶ್ ರನ್ನು ತಮ್ಮ ತಂದೆ ಸಮಾನರಾಗಿ ನೋಡುವ ಯಶ್, ಅವರ ನಿಧನದ ಹಿನ್ನಲೆಯಲ್ಲಿ ಅವರ ಗೌರವಾರ್ಥ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಅಭಿಮಾನಿಗಳೂ ತಮ್ಮ ಮನೆ ಬಳಿ ಬಂದು ಕೇಕ್, ಹಾರ ತುರಾಯಿ ಹಿಡಿದು ಬರ್ತ್ ಡೇ ಆಚರಿಸುವುದು ಬೇಡ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಈ ನಡುವೆ ತಮ್ಮನ್ನು ಕಷ್ಟದ ಸಂದರ್ಭದಲ್ಲಿಯೂ, ಎಷ್ಟೇ ಅಡೆತಡೆಗಳಿದ್ದರೂ ಬೆಂಬಲಿಸುವ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಸಲ್ಲಿಸಿರುವ ಯಶ್, ಸದ್ಯದಲ್ಲೇ ಯಶೋ ಯಾತ್ರೆ ಎಂಬ ಕಾರ್ಯಕ್ರಮದ ಮೂಲಕ ಪ್ರತೀ ಊರುಗಳಿಗೆ ಭೇಟಿ ನೀಡಿ ಅಭಿಮಾನಿಗಳ ಜತೆ ಕಳೆಯುವುದಾಗಿ ಪ್ರಾಮಿಸ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ