ಕೆಜಿಎಫ್ 2 ನೋಡಬೇಕಾದರೆ 21 ದಿನ ಮನೆಯಲ್ಲೇ ಇರಿ!

ಗುರುವಾರ, 26 ಮಾರ್ಚ್ 2020 (09:20 IST)
ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಮನೆಯಲ್ಲೇ ಕೂರಬೇಕೆಂದರೂ ಆದೇಶ ಉಲ್ಲಂಘಿಸುವವರಿಗಾಗಿ ಯಶ್ ಅಭಿಮಾನಿ ಬಳಗ ವಿಶಿಷ್ಟ ಕರೆ ನೀಡಿದೆ.


ಸಾಮಾಜಿಕ ಜಾಲತಾಣದಲ್ಲಿ ಯಶ್ ಅಭಿಮಾನಿಗಳ ಬಳಗ ನಿಮಗೆ ಕೆಜಿಎಫ್ 2 ವೀಕ್ಷಿಸುವ ಆಸೆಯಿದ್ದರೆ ಮುಂದಿನ 21 ದಿನ ಮನೆಯಲ್ಲೇ ಇರಿ ಎಂದು ಕರೆ ನೀಡಿದ್ದಾರೆ!

ಸರ್ಕಾರಗಳು ಎಷ್ಟೇ ಆದೇಶಿಸಿದರೂ ಹೊರಗಡೆ ತಿರುಗಾಡುತ್ತಿರುವ ಜನಸಾಮಾನ್ಯರಿಗೆ ಯಶ್ ಅಭಿಮಾನಿ ಬಳಗ ಈ ರೀತಿ ಆಫರ್ ನೀಡಿದೆ. ಕೊರೋನಾ ತಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಆಕರ್ಷಣೀಯ ಪೋಸ್ಟರ್ ಗಳು, ಒಕ್ಕಣೆಗಳ ಮೂಲಕ ಮನೆಯಲ್ಲೇ ಇರುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ