ಬೆಂಗಳೂರು: ಕೊರೋನಾವೈರಸ್ ಇಡೀ ಮನುಕುಲಕ್ಕೇ ಸವಾಲಾಗಿದೆ. ಇದರಿಂದಾಗಿ ಇಡೀ ವಿಶ್ವವೇ ಲಾಕ್ ಡೌನ್ ಮಾಡಿ ಕುಳಿತಿದೆ. ಇಂತಹ ಸಂದರ್ಭದಲ್ಲಿಯೂ ಈ ರೋಗ ಮಾಡಿದ ಲಾಭವೇನು ಗೊತ್ತಾ?
ಕೊರೋನಾವೈರಸ್ ಹರಡುವಿಕೆ ತಡೆಗಟ್ಟಲು ನಗರಗಳು ಸಂಪೂರ್ಣವಾಗಿ ಸ್ತಬ್ಧವಾಗಿದೆ. ಸದಾ ವಾಹನಗಳಿಂದ ಗಿಜಿಗುಟ್ಟುವ ಬೆಂಗಳೂರಿನಂತಹ ನಗರಗಳಲ್ಲಿ ಇದರಿಂದಾಗಿ ವಾಯು ಮಾಲಿನ್ಯ ಮಿತಿ ಮೀರಿತ್ತು.
ಒಂದು ವಾರ ಕಾಲ ಈ ರೀತಿ ವಾಹನ ದಟ್ಟಣೆ ಕಡಿಮೆಯಾಗುವುದರಿಂದ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ಅದೇ ರೀತಿ ವಾಹನ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಲಿದೆ. ಇದು ಎರಡು ಲಾಭ ಬಿಟ್ಟರೆ ಜನರಿಗೆ ಉಳಿದೆಲ್ಲಾ ರೀತಿಯಿಂದಲೂ ಇದು ಕಂಟಕವೇ ಸರಿ.