ಬಾಲಿವುಡ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್?

ಮಂಗಳವಾರ, 31 ಜನವರಿ 2023 (08:30 IST)
WD
ಮುಂಬೈ: ಕೆಜಿಎಫ್ ಸಿನಿಮಾ ಬಳಿಕ ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಗೆ ಈಗ ಬಾಲಿವುಡ್ ಆಫರ್ ಬಂದಿದೆ.

ನಿತೀಶ್ ತಿವಾರಿ ನಿರ್ದೇಶನ ಮಾಡಲಿರುವ ರಾಮಾಯಣ ಮೂಲದ ಕಥಾ ವಸ್ತು ಹೊಂದಿರುವ ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲು ರಾಕಿಂಗ್ ಸ್ಟಾರ್ ಯಶ್ ಜೊತೆ ಮಾತುಕತೆ ನಡೆದಿದೆಯಂತೆ.

ಇದಕ್ಕೆ ಮೊದಲು ಹೃತಿಕ್ ರೋಷನ್ ಈ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಕಳೆದ ಸಿನಿಮಾದಲ್ಲಿ ಹೃತಿಕ್ ನೆಗೆಟಿವ್ ಶೇಡ್ ಇರುವ ಸಿನಿಮಾ ಮಾಡಿದ್ದರು. ಇದೀಗ ಮತ್ತೆ ನೆಗೆಟಿವ್ ಪಾತ್ರ ಬೇಡ ಎಂಬ ಕಾರಣಕ್ಕೆ ಸಿನಿಮಾದಲ್ಲಿ ಅಭಿನಯಿಸಲು ನಿರಾಕರಿಸಿದ್ದಾರೆ. ಇದಕ್ಕೆ ಬದಲು ಈಗ ಯಶ್ ರನ್ನು ಕರೆತರಲು ಚಿತ್ರತಂಡ ಮಾತುಕತೆ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ