ಆಸ್ಕರ್ ನಾಮಿನೇಷನ್ ನಲ್ಲಿ ಕಾಂತಾರ, ವಿಕ್ರಾಂತ್ ರೋಣಗೆ ನಿರಾಸೆ

ಬುಧವಾರ, 25 ಜನವರಿ 2023 (08:40 IST)
Photo Courtesy: Twitter
ಬೆಂಗಳೂರು: ಈ ಬಾರಿ ಆಸ್ಕರ್ ನಲ್ಲಿ ಕನ್ನಡ ಚಿತ್ರಗಳೂ ಸ್ಪರ್ಧಿಸಲಿವೆ ಎಂಬ ಖುಷಿಯಲ್ಲಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಕಾಂತಾರ, ವಿಕ್ರಾಂತ್ ರೋಣ ನಾಮಿನೇಷನ್ ಲಿಸ್ಟ್ ನಿಂದ ಹೊರಬಿದ್ದಿದೆ.

ಈ ಬಾರಿಯ ಆಸ್ಕರ್ ನಾಮಿನೇಷನ್ ಲಿಸ್ಟ್ ಹೊರಬಿದ್ದಿದ್ದು, ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗ, ಕಿರುಚಿತ್ರ  ವಿಭಾಗದಲ್ಲಿ ಭಾರತದ ‘ಆಲ್ ದಟ್ ಬ್ರೀಥ್ಸ್’, ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಿನಿಮಾಗಳು ಸ್ಥಾನ ಪಡೆದಿವೆ.

ಆದರೆ ಕನ್ನಡದ ಕಾಂತಾರ, ವಿಕ್ರಾಂತ್ ರೋಣ ಸಿನಿಮಾ ನಾಮಿನೇಷನ್ ಪಟ್ಟಿಯಿಂದ ಹೊರಬಿದ್ದಿದೆ. ಅದರಲ್ಲೂ ಕಾಂತಾರ ಮೇಲೆ ಭಾರೀ ನಿರೀಕ್ಷೆಯಿತ್ತು. ಉತ್ತಮ ನಟ, ಉತ್ತಮ ಚಿತ್ರ ವಿಭಾಗದಲ್ಲಿ ಸ್ಪರ್ಧಿಸಿತ್ತು. ಆದರೆ ಅಂತಿಮ ನಾಮಿನೇಷನ್ ಪಟ್ಟಿಯಿಂದ ಈ ಎರಡೂ ಚಿತ್ರಗಳು ಹೊರಬಿದ್ದು ನಿರಾಸೆ ಅನುಭವಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ