ರಾಕಿಂಗ್ ಸ್ಟಾರ್ ಯಶ್ ಗೆ ಈಗ ಹೊಸ ಗರಿಮೆ

ಶನಿವಾರ, 18 ಮೇ 2019 (08:20 IST)
ಬೆಂಗಳೂರು: ಕೆಜಿಎಫ್ ಹಿಟ್ ಆದ ಮೇಲೆ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಬಿಟ್ಟರು. ಇದೀಗ ಯಶ್ ದಿ ಟೈಮ್ಸ್ 50 ಮೋಸ್ಟ್ ಡಿಸೈರೇಬಲ್ ಮೆನ್ ಪಟ್ಟಿಯಲ್ಲಿ 14 ನೇ ಸ್ಥಾನ ಪಡೆದಿದ್ದಾರೆ.


ಕ್ರೀಡೆ, ಮನರಂಜನೆ ಸೇರಿದಂತೆ ವಿವಿಧ 50 ಮಂದಿ ಸ್ಟಾರ್ ಗಳ ಪಟ್ಟಿಯಲ್ಲಿ ಯಶ್ ಗೆ 14 ನೇ ಸ್ಥಾನ ಸಿಕ್ಕಿದೆ. ಬಾಲಿವುಡ್ ನಟ ವಿಕ್ಕಿ ಕೌಶಲ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರೆ ವಿಜಯ್ ದೇವರಕೊಂಡ ನಾಲ್ಕನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಭಾರತದ ನಟರ ಪೈಕಿ ಯಶ್, ವಿಜಯ್ ದೇವರಕೊಂಡ ಹೊರತಾಗಿ ಪ್ರಭಾಸ್, ದುಲ್ಕರ್ ಸಲ್ಮಾನ್ ಮುಂತಾದವರು ಸ್ಥಾನ ಪಡೆದಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 5 ನೇ ಸ್ಥಾನದಲ್ಲಿದ್ರೆ, ಕೆಎಲ್ ರಾಹುಲ್ 25, ಹಾರ್ದಿಕ್ ಪಾಂಡ್ಯ  30 ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ