ಅಭಿಮಾನಿಯೊಬ್ಬಳ ಆಸೆ ಈಡೇರಿಸಿದ ರಾಕಿಂಗ್ ಸ್ಟಾರ್

ಮಂಗಳವಾರ, 26 ಜುಲೈ 2016 (14:00 IST)
ಯಶ್ ಅವರು ಕೇವಲ ತೆರೆ ಮೇಲೆ ಮಾತ್ರ ಹೀರೋ ಅಲ್ಲ ನಿಜ ಜೀವನದಲ್ಲೂ ಅವರು ಅಭಿಮಾನಿಗಳಿಗೆ ಹೀರೋನೇ ಅನ್ನೋದು ಅದೆಷ್ಟೋ ಬಾರಿ ಪ್ರೂವ್ ಆಗಿದೆ. ಮೊನ್ನೆ ಉತ್ತರ ಕರ್ನಾಟಕದಲ್ಲಿ ಬರದಿಂದಾಗಿ ಜನ ನೀರಿಲ್ಲದೇ ತತ್ತರಿಸಿ ಹೋಗಿದ್ದಾಗ ಯಶ್ ಅವರು ತನ್ನ ಸ್ವಯಂಸೇವಕರ ಮೂಲಕ ಅನೇಕ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಇದೀಗ ಮತ್ತೊಮ್ಮೆ ತಾನು ರಿಯರ್ ಹೀರೋ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.
ಮೊನ್ನೆ ರಾಕಿಂಗ್ ಸ್ಟಾರ್ ಯಶ್ಅವರು ಹ್ಯಾಪಿ ಬರ್ತಡೇ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕ ತೆರಳಿದ್ದರು. ಈ ಕಾರ್ಯಕ್ರಮದ ವೇಳೆ ಯುವತಿಯೊಬ್ಬಳು ಯಶ್ ಅವರೊಂದಿಗೆ ಫೋಟೋ ತೆಗೆಸಿಕೊಳ್ಳೋದಕ್ಕೆ ಮುಂದೆ ಬಂದಳಂತೆ.ಆದ್ರೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಯಶ್ ಅವರ ಜೊತೆ ಫೋಟೋ ತೆಗೆಸಿಕೊಳ್ಳೋದಕ್ಕೆ ಆ ಯುವತಿಗೆ ಅವಕಾಶ ಕೊಡಲಿಲ್ಲವಂತೆ. ಇದರಿಂದ ಯುವತಿ ಅಳೋದಕ್ಕೆ ಆರಂಭಿಸಿದಳು. ಇದನ್ನು ದೂರದಿಂದಲೇ ಗಮನಿಸುತ್ತಿದ್ದ ಯಶ್ ಅವರು ಭದ್ರತಾ ಸಿಬ್ಬಂದಿಗೆ ಯುವತಿಯನ್ನುತನ್ನ ಬಳಿ ಕಳುಹಿಸುವಂತೆ ಹೇಳಿದ್ರಂತೆ.ಅಲ್ಲದೇ ತನ್ನ ಜೊತೆ ಫೋಟೋ ತೆಗೆಸಿಕೊಳ್ಳೋದಕ್ಕೆ ಅವಕಾಸ ನೀಡಿದ್ರಂತೆ. ಯುವತಿಯೊಂದಿಗೆ ಫೋಟೋಗೆ ಪೋಸ್ ಕೊಟ್ಟು ಆಕೆಯನ್ನು ಕಳುಹಿಸಿದ್ರಂತೆ.
 
  ಅಭಿಮಾನಿಗಳಿಂದಾನೇ ನಾವು ಸ್ಟಾರ್ ಆಗಿರೋದು ಅನ್ನೋ ಮಾತನ್ನು ಯಶ್ ಆಗಾಗ್ಗೆ ಹೇಳುತ್ತಲೇ ಇರುತ್ತಾರೆ.ಆದ್ರೆ ಇದೀಗ ಅವರು ಆಡೋ ಮಾತು ನಿಜ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.ಆ ಮೂಲಕ ಅಭಿಮಾನಿಗಳಿಗೆ ತಾನು ಎಷ್ಟು ಬೆಲೆ ನೀಡುತ್ತೇನೆ ಅನ್ನೋದನ್ನು ಯಶ್ ಅವರು ತೋರಿಸಿಕೊಟ್ಟಿದ್ದಾರೆ,

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ