ಶಾರುಖ್ ಖಾನ್ ಹಾಗೆ ಹೇಳಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್ ಈಗ ಹೀಗೆ ಹೇಳಿದ್ರಾ?! ನೆಟ್ಟಿಗರಿಗೆ ಅನುಮಾನ
ಶನಿವಾರ, 24 ಡಿಸೆಂಬರ್ 2022 (09:00 IST)
Photo Courtesy: Twitter
ಬೆಂಗಳೂರು: ಮೊನ್ನೆಯಷ್ಟೇ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೊಗಳಿದ್ದು ಭಾರೀ ಸುದ್ದಿಯಾಗಿತ್ತು.
ಯಶ್ ಬಗ್ಗೆ ಹೇಳಿ ಎಂದು ಕೇಳಿದ್ದಕ್ಕೆ ಶಾರುಖ್ ವಾವ್ ಎಂದು ಒಂದೇ ಮಾತಿನಲ್ಲಿ ಹೊಗಳಿದ್ದರು. ಶಾರುಖ್ ಹೇಳಿಕೆ ಭಾರೀ ವೈರಲ್ ಆಗಿತ್ತು. ಇದರ ನಡುವೆ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾದ ಬೇಶರಮ್ ಹಾಡಿನ ಉಡುಪು ಭಾರೀ ವಿವಾದಕ್ಕೆ ಗುರಿಯಾಗಿತ್ತು.
ಇದರ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಎಲ್ಲಾ ಚಿತ್ರರಂಗಕ್ಕೆ ಗೌರವ ನೀಡಬೇಕು. ಕನ್ನಡ ಚಿತ್ರರಂಗವನ್ನು ಎಲ್ಲರೂ ಕಡೆಗಣಿಸುತ್ತಿದ್ದಾಗ ನಾವು ನೋವು ಅನುಭವಿಸುತ್ತಿದ್ದೆವು. ಗೌರವ ಪಡೆಯಲು ನಾವು ಶ್ರಮಿಸಿದ್ದೇವೆ. ಈಗ ನಮಗೆ ಸಿಕ್ಕಿತೆಂದು ಬೇರೆಯವರನ್ನು ಕೀಳಾಗಿ ನೋಡಬಾರದು. ಬಾಲಿವುಡ್ ನ್ನೂ ಗೌರವಿಸಿ. ಉತ್ತರ, ದಕ್ಷಿಣ ಸಿನಿಮಾ ಎಂಬ ಬೇಧ ಬೇಡ ಎಂದಿದ್ದಾರೆ ಯಶ್.
ಶಾರುಖ್ ಹೊಗಳಿದ ಬೆನ್ನಲ್ಲೇ ಯಶ್ ಹೀಗೆ ಹೇಳಿರುವುದರಿಂದ ಇದು ಪಠಾಣ್ ವಿವಾದದ ಕುರಿತು ಯಶ್ ಹೇಳಿದ್ದಾಗಿರಬಹುದು ಎಂದು ನೆಟ್ಟಿಗರು ಅನುಮಾನಿಸಿದ್ದಾರೆ.