ಕೆಜಿಎಫ್ ಸಿನಿಮಾ ನೋಡಲು ಜಪಾನಿ ಭಾಷೆಯಲ್ಲೇ ಮನವಿ ಮಾಡಿದ ರಾಕಿ ಭಾಯಿ ಯಶ್

ಶುಕ್ರವಾರ, 7 ಜುಲೈ 2023 (16:24 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಕೆಜಿಎಫ್ 1 ಮತ್ತು 2 ಸಿನಿಮಾ ಜಪಾನ್ ಭಾಷೆಯಲ್ಲಿ ತೆರೆ ಕಾಣುತ್ತಿದೆ.

ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಜಪಾನ್ ಅಭಿಮಾನಿಗಳಿಗೆ ಸಿನಿಮಾ ನೋಡಲು ಮನವಿ ಮಾಡಿದ್ದಾರೆ. ವಿಶೇಷವೆಂದರೆ ಅವರು ಜಪಾನೀ ಭಾಷೆಯಲ್ಲೇ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

‘ನಮಸ್ತೆ ಜಪಾನ್. ನನ್ನ ಕೆಜಿಎಫ್ 1 ಮತ್ತು 2 ಸಿನಿಮಾ ಜಪಾನ್ ನಲ್ಲಿ ರಿಲೀಸ್ ಆಗುತ್ತಿದೆ. ಕೆಜಿಎಫ್ ನಲ್ಲಿ ಸಾಕಷ್ಟು ಮನರಂಜನೆ, ಮ್ಯಾಡ್ ನೆಸ್ ಇದೆ. ತಪ್ಪದೇ ಸಿನಿಮಾ ನೋಡಿ’ ಎಂದು ಯಶ್ ಮನವಿ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ