ಅಂದು ರಾಕಿ ಭಾಯಿ ಬರ್ತ್ ಡೇ ಆಚರಿಸಿಕೊಂಡಂತೆ ಇಂದು ರಿಷಬ್ ಆಚರಿಸಿಕೊಳ್ಳುತ್ತಿದ್ದಾರೆ!

ಶುಕ್ರವಾರ, 7 ಜುಲೈ 2023 (08:30 IST)
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಕೊಟ್ಟ ಇತ್ತೀಚೆಗಿನ ಇಬ್ಬರು ಸ್ಟಾರ್ ಗಳೆಂದರೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಿಷಬ್ ಶೆಟ್ಟಿ.

ಇಂದು ರಿಷಬ್ ಶೆಟ್ಟಿ ಜನ್ಮದಿನವಾಗಿದ್ದು, ಅಭಿಮಾನಿಗಳೊಂದಿಗೆ ಈ ಬಾರಿ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕಾಂತಾರ ಸಕ್ಸಸ್ ಗೆ ಈ ಮೂಲಕ ಜನರಿಗೆ ಧನ್ಯವಾದ ಹೇಳಲಿದ್ದಾರೆ.

ವಿಶೇಷವೆಂದರೆ ಅಂದು ಕೆಜಿಎಫ್ 1 ಸಕ್ಸಸ್ ಆದ ಬಳಿಕ ರಾಕಿಂಗ್ ಸ್ಟಾರ್ ಯಶ್ ಕೂಡಾ ಅಭಿಮಾನಿಗಳೊಂದಿಗೆ ನಂದಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ ಬರ್ತ್ ಡೇ ಆಚರಿಸಿದ್ದರು. ಇದೀಗ ರಿಷಬ್ ಕೂಡಾ ಕಾಂತಾರ 1 ಸಕ್ಸಸ್ ಆದ ಬಳಿಕ ಬರುತ್ತಿರುವ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದೇ ನಂದಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ರಾಕಿ ಭಾಯಿ ಯಶ್ ಹಾದಿಯನ್ನೇ ರಿಷಬ್ ಕೂಡಾ ಅನುಸರಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ