ಮೈಸೂರಿನಲ್ಲಿ ಫಿಲಂ ಸಿಟಿ ಘೋಷಿಸಿದ ಸಿಎಂ ಸಿದ್ದು

ಶುಕ್ರವಾರ, 7 ಜುಲೈ 2023 (15:58 IST)
Photo Courtesy: Twitter
ಬೆಂಗಳೂರು: ಹೈದರಾಬಾದ್ ನಂತೆ ನಮ್ಮ ರಾಜ್ಯದಲ್ಲೂ ಸುಸಜ್ಜಿತ ಫಿಲಂ ಸಿಟಿ ನಿರ್ಮಾಣವಾಗಬೇಕು ಎಂಬುದು ಚಿತ್ರರಂಗದ ಬಹುದಿನಗಳ ಬೇಡಿಕೆ. ಇದೀಗ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸುವುದಾಗಿ ಘೋಷಣೆ ಮಾಡಿದ್ದಾರೆ.

ಇತ್ತೀಚೆಗೆ ನೂತನ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದ ಕನ್ನಡ ಚಿತ್ರೋದ್ಯಮದ ನಿಯೋಗ ಫಿಲಂ ಸಿಟಿ ಬೇಡಿಕೆಯನ್ನು ಮುಂದಿಟ್ಟಿತ್ತು. ಅದರಂತೆ ಈಗ  ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಫಿಲಂ ಸಿಟಿ ನಿರ್ಮಿಸುವುದಾಗಿ ಘೋಷಣೆಯಾಗಿದೆ.

ಇದಕ್ಕೆ ಮೊದಲು ಎಚ್ ಡಿ ಕುಮಾರಸ್ವಾಮಿ ಸರ್ಕಾರ ರಾಮನಗರದಲ್ಲಿ, ಬಸವರಾಜ ಬೊಮ್ಮಾಯಿ ಸರ್ಕಾರ ಬೆಂಗಳೂರಿನಲ್ಲಿಯೇ ಫಿಲಂ ಸಿಟಿ ನಿರ್ಮಿಸುವುದಾಗಿ ಘೋಷಿಸಿತ್ತು. ಆದರೆ ಅದು ಯಾವುದೂ ಕೈಗೂಡಿರಲಿಲ್ಲ. ಈಗಲಾದರೂ ಚಿತ್ರರಂಗದ ಬಹುದಿನಗಳ ಬೇಡಿಕೆ ಈಡೇರುತ್ತದಾ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ