ಯಶ್ ಹೇಳಿಕೆಯಿಂದ ತಣ್ಣಗಾಗುತ್ತಾ ಬೀಸ್ಟ್/ಕೆಜಿಎಫ್ 2 ವಾರ್
ಕೆಜಿಎಫ್ 2 ಟ್ರೈಲರ್ ಲಾಂಚ್ ಬಳಿಕ ಮಾತನಾಡಿದ್ದ ಯಶ್, ಬೀಸ್ಟ್ ವರ್ಸಸ್ ಕೆಜಿಎಫ್ 2 ಅಲ್ಲ, ಬೀಸ್ಟ್ ಮತ್ತು ಕೆಜಿಎಫ್ 2. ವಾರ್ ಎನ್ನಲು ಇದು ಚುನಾವಣೆಯೋ, ರಾಜಕೀಯ ರಣಾಂಗಣವೋ ಅಲ್ಲ. ನಾವು ಸಿನಿಮಾ ಸ್ನೇಹಿತರು. ಒಬ್ಬರಿಗೊಬ್ಬರು ಬೆಂಬಲಿಸಬೇಕು. ನಾನು ನನ್ನ ಹಿರಿಯರಿಗೆ ಯಾವತ್ತೂ ಗೌರವ ಕೊಡುತ್ತೇನೆ. ಬೀಸ್ಟ್ ಸಿನಿಮಾವನ್ನು ನಾನೂ ನೋಡುತ್ತೇನೆ ಎಂದಿದ್ದರು.
ಯಶ್ ಅವರ ಈ ಹೇಳಿಕೆಯಿಂದ ಫ್ಯಾನ್ಸ್ ನಡುವೆ ಶುರುವಾಗಿದ್ದ ವಾರ್ ಕೊಂಚ ತಣ್ಣಗಾಗಿದೆ. ಬೀಸ್ಟ್ ಸಿನಿಮಾ ಏಪ್ರಿಲ್ 13 ರಂದು ತೆರೆಗೆ ಬರಲಿದ್ದರೆ ಕೆಜಿಎಫ್ 2 ಏಪ್ರಿಲ್ 14 ರಂದು ತೆರೆಗೆ ಬರುತ್ತಿದೆ.