ಉಪೇಂದ್ರ ಕುಟುಂಬದ ಕುಡಿ ನಿರಂಜನ್ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಧ್ವನಿ

ಬುಧವಾರ, 19 ಆಗಸ್ಟ್ 2020 (11:21 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸಹೋದರನ ಪುತ್ರ ನಿರಂಜನ್ ಸುದೀಂದ್ರ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಅಭಿನಯಿಸುತ್ತಿರುವ ‘ಸೂಪರ್ ಸ್ಟಾರ್’ ಸಿನಿಮಾ ಟೀಸರ್ ಗೆ ರಾಕಿಂಗ್ ಸ್ಟಾರ್ ಯಶ್ ಧ್ವನಿ ನೀಡಲಿದ್ದಾರೆ.


ಈಗಾಗಲೇ ನಿರಂಜನ್ ಅಭಿನಯದ ಸೂಪರ್ ಸ್ಟಾರ್ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸಾಕಷ್ಟು ಭರವಸೆ ಮೂಡಿಸಿದ್ದಾರೆ. ತಾವು ಯಶ್ ರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದೇವೆ ಎಂದು ನಿರಂಜನ್ ಹೇಳಿಕೊಂಡಿದ್ದಾರೆ.

ಈಗ ಸ್ವತಃ ಯಶ್ ಟೀಸರ್ ಗೆ ಧ್ವನಿ ನೀಡಿದ್ದು, ಧ್ವನಿ ಮುದ್ರಣ ಮುಗಿಸಿಕೊಟ್ಟಿದ್ದಾರೆ. ನಾಳೆ ಸೂಪರ್ ಸ್ಟಾರ್ ಟೀಸರ್  ಲಾಂಚ್ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ