ತಂದೆಯಾದ ‘ರಾಜಕುಮಾರ’ ನಿರ್ದೇಶಕ ಸಂತೋಷ್ ಆನಂದ್ ರಾಮ್

ಮಂಗಳವಾರ, 18 ಆಗಸ್ಟ್ 2020 (17:49 IST)
ಬೆಂಗಳೂರು: ‘ರಾಜಕುಮಾರ’, ಮಿಸ್ಟರ್ ಆಂಡ್ ಮಿಸೆಸ್ ರಾಮಚಾರಿ ಮುಂತಾದ ಹಿಟ್ ಸಿನಿಮಾಗಳ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಂದೆಯಾದ ಖುಷಿಯಲ್ಲಿದ್ದಾರೆ.


ನಿನ್ನೆಯಷ್ಟೇ ಸಂತೋಷ್ ಪತ್ನಿ ಸುರಭಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸಂತೋಷ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಅವರಿಗೆ ಕಲಾವಿದರು, ಅಭಿಮಾನಿಗಳು, ಸ್ನೇಹಿತರು ಶುಭಾಷಯಗಳ ಸುರಿಮಳೆಗೈದಿದ್ದಾರೆ.  ಅಮ್ಮ ಮತ್ತು ಮಗು ಇಬ್ಬರೂ ಕ್ಷೇಮವಾಗಿದ್ದಾರೆ ನಿಮ್ಮ ಹಾರೈಕೆ ಹೀಗೇ ಇರಲಿ ಎಂದು ಸಂತೋಷ್ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ