ಪ್ರೊಡಕ್ಷನ್ ಹೌಸ್ ನಿರ್ಮಾಣಕ್ಕೆ ಮುಂದಾದ ರಾಕಿ ಭಾಯಿ ಯಶ್?

ಶುಕ್ರವಾರ, 2 ಡಿಸೆಂಬರ್ 2022 (08:20 IST)
Photo Courtesy: Twitter
ಬೆಂಗಳೂರು: ಕೆಜಿಎಫ್ 2 ಬಳಿಕ ರಾಕಿಂಗ್ ಸ್ಟಾರ್ ಯಶ್ ಇದುವರೆಗೆ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಯಶ್ ಮುಂದಿನ ಸಿನಿಮಾ ಯಾರ ಜೊತೆಗೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಈ ನಡುವೆ ಯಶ್ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಲು ತಯಾರಿ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬೇರೆ ನಿರ್ಮಾಪಕರ ಬದಲು ತಮ್ಮದೇ ನಿರ್ಮಾಣದಲ್ಲಿ ಹೊಸ ಸಿನಿಮಾ ನಿರ್ಮಿಸಲು ಯಶ್ ತಯಾರಿ ನಡೆಸಿದ್ದಾರಂತೆ.

ಮಗಳು ಐರಾ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ನಿರ್ಮಿಸಲಿದ್ದಾರೆ. ಮುಂದಿನ ತಿಂಗಳು ಅವರ ಹುಟ್ಟುಹಬ್ಬವಿದ್ದು, ಆ ವೇಳೆ ಘೋಷಣೆಯಾಗುವ ಸಾಧ‍್ಯತೆಯಿದೆ ಎಂಬ ಮಾತು ಹರಿದಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ