ಅಭಿಷೇಕ್ ಅಂಬರೀಶ್ ಮದುವೆಯಾಗ್ತಿರೋ ಅವಿವಾ ಹಿನ್ನಲೆಯೇನು?

ಗುರುವಾರ, 1 ಡಿಸೆಂಬರ್ 2022 (08:50 IST)
Photo Courtesy: Instagram
ಬೆಂಗಳೂರು: ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮದುವೆಯಾಗಲಿದ್ದಾರೆ, ಇದೇ ವಾರ ಅವರ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ.

 ಈ ನಡುವೆ ಅವರು ಮದುವೆಯಾಗಲಿರುವ ಹುಡುಗಿ ಯಾರೆಂದು ಈಗ ಬಹಿರಂಗವಾಗಿದೆ. ಮೂಲಗಳ ಪ್ರಕಾರ ಅಭಿಷೇಕ್ ಮಾಡೆಲ್ ಅವಿವಾ ಬಿಡ್ಡಪ್ಪಾ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.

ಇಬ್ಬರೂ ಡಿಸೆಂಬರ್ 11 ಕ್ಕೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಅಸಲಿಗೆ ಇಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಸ್ನೇಹಿತರಾಗಿದ್ದರು. ಅವಿವಾ ಮೂಲತಃ ಕೊಡಗಿನವರಾಗಿದ್ದು, ಮಾಡೆಲ್ ಆಗಿದ್ದಾರೆ. ಖ್ಯಾತ ವಸ್ತ್ರ ವಿನ್ಯಾಸಕರಾದ ಪ್ರಸಾದ್ ಬಿಡ್ಡಪ್ಪಾ ಮತ್ತು ಜುಡಿತ್ ಬಿಡ್ಡಪ್ಪಾ ಪುತ್ರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ