ಯಾರ ಬರ್ತ್ ಡೇಗೂ ಶುಭ ಹಾರೈಸದ ರಾಕಿ ಭಾಯಿ ಯಶ್, ಅಪ್ಪು ನೆನಪು ಮಾಡಿಕೊಂಡಿದ್ದು ಹೀಗೆ!
ಯಶ್-ರಾಧಿಕಾ ಜೋಡಿಗೆ ಪುನೀತ್ ರಾಜ್ ಕುಮಾರ್ ಎಂದರೆ ವಿಶೇಷ ಗೌರವ. ಇವರ ನಡುವೆ ಆಪ್ತ ಒಡನಾಟವಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಅಪ್ಪು ಸಾವನ್ನಪ್ಪಿದ ಸಂದರ್ಭದಲ್ಲಿ ಯಶ್ ದೊಡ್ಮನೆ ಕುಟುಂಬದ ಜೊತೆಗೇ ಇದ್ದು ಸಹಾಯ ಮಾಡಿದ್ದರು.
ಇದೀಗ ಪುನೀತ್ ಜನ್ಮದಿನಕ್ಕೆ ಶುಭ ಹಾರೈಸಿರುವ ಯಶ್, ಅಪ್ಪು ಜೊತೆಗಿನ ಫೋಟೋ ಪ್ರಕಟಿಸಿ, ಯಾವತ್ತೂ ಅಳಿಸಲಾಗದ ನಿಮ್ಮ ನಗು, ಬೇರೆಲ್ಲೂ ಸಿಗದ ನಿಮ್ಮ ಆತ್ಮೀಯತೆ, ಯಾವತ್ತೂ ನಿಲ್ಲದ ಎನರ್ಜಿ, ಯಾರಿಗೂ ಕಿತ್ತುಕೊಳ್ಳಲಾಗದ ಪವರ್, ಅವರು ಈಗಲೂ ಬದುಕಿದ್ದಾರೆ. ಜನ್ಮ ದಿನದ ಶುಭಾಶಯಗಳು ಅಪ್ಪು ಸರ್ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.