ಸ್ಟಾರ್ ಆದ್ರೂ ಬೇರು ಮರೆತಿಲ್ಲ! ಕಿರಾಣಿ ಅಂಗಡಿಗೆ ಬಂದು ಕುಲ್ಫೀ ಸವಿದ ಯಶ್-ರಾಧಿಕಾ
ಯಶ್ ಮತ್ತು ರಾಧಿಕಾ ಸ್ಯಾಂಡಲ್ ವುಡ್ ನ ಐಡಿಯಲ್ ಕಪಲ್. ರೀಲ್ ನಿಂದ ರಿಯಲ್ ವರೆಗೆ ಎಲ್ಲರೂ ಜೋಡಿ ಎಂದರೆ ಹೀಗಿರಬೇಕು ಎನ್ನುವಂತಹ ಮುದ್ದಾದ ಜೋಡಿ. ಇತ್ತೀಚೆಗೆ ಇಬ್ಬರೂ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು. ಯಶ್ ಮತ್ತು ರಾಧಿಕಾ ಎಷ್ಟೇ ಶ್ರೀಮಂತಿಕೆ ಬಂದರೂ ತಮ್ಮ ಬೇರು ಮರೆತಿಲ್ಲ ಎನ್ನುವುದಕ್ಕೆ ಈಗ ಹರಿದಾಡುತ್ತಿರುವ ಫೋಟೋಗಳೇ ಸಾಕ್ಷಿ.
ಯಶ್ ಮತ್ತು ರಾಧಿಕಾ ತಮ್ಮ ಮನೆಯ ಬಳಿಕ ಕಿರಾಣಿ ಅಂಗಡಿಯೊಂದರಲ್ಲಿ ಕುಲ್ಫೀ ಸವಿದಿದ್ದಾರೆ. ಎಂದಿನಂತೇ ಹಿಂದೆ-ಮುಂದೆ ಬಾಡಿ ಗಾರ್ಡ್ ಗಳ ಸದ್ದುಗದ್ದಲವಿಲ್ಲದೇ ಸಾಮಾನ್ಯ ದಂಪತಿಯಂತೇ ಅಂಗಡಿಗೆ ಬಂದಿದ್ದು ನೋಡಿ ಎಲ್ಲರಿಗೂ ಶಾಕ್ ಆಗಿದೆ. ಯಶ್ ಮತ್ತು ರಾಧಿಕಾರನ್ನು ಗುರುತಿಸಿದ ಸ್ಥಳೀಯರು ಫೋಟೋಗೆ ಮುಗಿಬಿದ್ದಿದ್ದಾರೆ. ದಂಪತಿ ಕೂಡಾ ಖುಷಿಯಿಂದಲೇ ಜನರ ಜೊತೆ ಪೋಸ್ ಕೊಟ್ಟು ಕುಲ್ಫೀ ಸವಿದು ಕ್ವಾಲಿಟಿ ಟೈಂ ಕಳೆದು ಅಲ್ಲಿಂದ ತೆರಳಿದ್ದಾರೆ. ಜೋಡಿ ಎಂದರೆ ಹೀಗಿರಬೇಕು, ಪ್ರೀತಿಸುವುದು ಹೇಗೆ ಎಂದು ಈ ಜೋಡಿಯನ್ನು ನೋಡಿ ಕಲಿಯಬೇಕು ಎಂದು ಈಗ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.