ಗೋವಾ ಕಡಲತೀರದಲ್ಲಿ ರಾಕಿ ಭಾಯಿ ಯಶ್ ಫ್ಯಾಮಿಲಿ

ಭಾನುವಾರ, 10 ಸೆಪ್ಟಂಬರ್ 2023 (17:12 IST)
Photo Courtesy: Twitter
ಪಣಜಿ: ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿರುವ ರಾಕಿಂಗ್ ಸ್ಟಾರ್ ಯಶ್ ಈಗ ಫ್ಯಾಮಿಲಿ ಜೊತೆ ಪ್ರವಾಸ ಮಾಡುತ್ತಿದ್ದಾರೆ.

ರಾಧಿಕಾ ಅಜ್ಜಿ ಮನೆ ಗೋವಾದಲ್ಲಿದೆ. ಆಗಾಗ ಯಶ್-ರಾಧಿಕಾ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇದೀಗ ಬ್ರೇಕ್ ನಲ್ಲಿ ಯಶ್, ರಾಧಿಕಾ ಮತ್ತು ಮಕ್ಕಳು ಗೋವಾದಲ್ಲಿ ಕಾಲಕಳೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಯಶ್ ಇಲ್ಲಿ ಜಿಮ್ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು.

ಈಗ ರಾಧಿಕಾ ಮತ್ತು ಮಕ್ಕಳ ಜೊತೆ ಕಡಲ ತೀರದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ