ಇನ್ನು ಏಕಾಏಕಿ ಸಿನಿಮಾ ರಿಲೀಸ್ ಆಗ್ತಿರೋದು ಮುಂದಕ್ಕೆ ಹೋಗ್ತಿರೋದಕ್ಕೆ ಕಾರಣ ಅದೇ ದಿನ ಜೂಮ್ ಸಿನಿಮಾ ರಿಲೀಸ್ ಆಗ್ತಿರೋದು. ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆದ್ರೆ ಚೆನ್ನಾಗಿರಲ್ಲ ಅಂತಾ 'ರನ್ ಆಂಟನಿ' ಸಿನಿಮಾ ತಂಡ ತಮ್ಮ ಸಿನಿಮಾದ ರಿಲೀಸ್ ಡೇಟ್ ನ್ನು ಮುಂದಕ್ಕೆ ಹಾಕಿದೆಯಂತೆ.ಇನ್ನು ಸಿನಿಮಾ ರಿಲೀಸ್ ಮುಂದಕ್ಕೆ ಹೋಗೋದಕ್ಕೆ ಇನ್ನೂ ಒಂದು ಕಾರಣ ಕೂಡ ಇದೆ. ಚಿತ್ರ ಇನ್ನೂ ಸೆನ್ಸಾರ್ ಆಗಿಲ್ವಂತೆ. ಮುಂದಿನ ಒಂದು ವಾರದಲ್ಲಿ ಹರಿಬರಿಯಾಗಿ ಸೆನ್ಸರ್ ಮಾಡಿಸಿ, ಆ ನಂತರ ಚಿತ್ರಮಂದಿರಗಳನ್ನು ತರಾತುರಿಯಲ್ಲಿ ಹಿಡಿಯುವ ಬದಲು, ಮೊದಲು ಸೆನ್ಸಾರ್ ಮಾಡಿಸಿ, ನಂತರ ಆರಾಮಾವಾಗಿ ರಿಲೀಸ್ ಮಾಡೋ ಪ್ಲಾನ್ ನಲ್ಲಿದ್ದಾರಂತೆ.