ಸರಿಗಮಪದ ಹಳ್ಳಿ ಹುಡುಗ ಹನುಮಂತಪ್ಪನಿಗೆ ಕಾದಿದೆ ದೊಡ್ಡ ಛಾನ್ಸ್!

ಸೋಮವಾರ, 25 ಫೆಬ್ರವರಿ 2019 (09:16 IST)
ಬೆಂಗಳೂರು: ಸರಿಗಮಪ ಸೀಸನ್ 15 ನಲ್ಲಿ ಸದ್ದು ಮಾಡಿದ ಸ್ಪರ್ಧಿಗಳಲ್ಲಿ ಹಳ್ಳಿಯಿಂದ ಬಂದ ಹನುಮಂತಪ್ಪ ಮೊದಲಿಗರು. ಶಾಸ್ತ್ರೀಯ ಗಾಯನದ ಗಂಧ ಗಾಳಿ ಗೊತ್ತಿಲ್ಲದೇ ಇದ್ದರೂ ಜನಪದ ಕಂಠದಿಂದ ಸರಿಗಮಪ ವೇದಿಕೆಯೇರಿ ಇಂದು ರಾಜ್ಯಾದ್ಯಂತ ಮನೆ ಮಾತಾಗಿರುವ ಹನುಮಂತಪ್ಪನಿಗೆ ಈಗ ಬಂಪರ್ ಛಾನ್ಸ್ ಬಂದಿದೆ.


ಈ ಬಾರಿ ಸರಿಗಮಪ ಫೈನಲ್ಸ್ ನಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ ಹನುಮಂತಪ್ಪಗೆ ಈಗ ತಮ್ಮ ಸಿನಿಮಾದಲ್ಲಿ ಹಾಡಿಸಲು ದೊಡ್ಡ ನಿರ್ದೇಶಕರೊಬ್ಬರು ಕಾದಿದ್ದಾರಂತೆ. ಹಾಗಂತ ತೀರ್ಪುಗಾರರಲ್ಲಿ ಒಬ್ಬರಾದ ಅರ್ಜುನ್ ಜನ್ಯಾ ಫೈನಲ್ಸ್ ವೇದಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.

ಈಗಾಗಲೇ ಸರಿಗಮಪ ವೇದಿಕೆಯಲ್ಲಿ ಮಿಂಚಿದ ಸಂಚಿತ್ ಹೆಗ್ಡೆ, ನಿಹಾಲ್, ಜ್ವಾನೇಶ್, ಅಂಕಿತಾ ಕುಂಡು, ಚಿನ್ನಪ್ಪ ಸೇರಿದಂತೆ ಅನೇಕ ಪ್ರತಿಭೆಗಳು ಸ್ಯಾಂಡಲ್ ವುಡ್ ನ ಸಿನಿಮಾಗಳಿಗೆ ಹಾಡಿ ತಮ್ಮ ಪ್ರತಿಭೆ ಸಾಬೀತುಮಾಡಿದ್ದಾರೆ. ಈಗ ಹನುಮಂತಪ್ಪನಿಗೂ ಅವಕಾಶವೊಂದು ಬಂದಿದೆಯಂತೆ. ಆ ಮೂಲಕ ಎಲ್ಲೋ ಹಳ್ಳಿಯಲ್ಲಿ ಕುರಿ ಕಾಯುತ್ತಿದ್ದ ಹುಡುಗನಿಗೆ ಈಗ ಸ್ಟಾರ್ ಆಗುವ ಅವಕಾಶ ಸಿಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ