ಕೀರ್ತನ್ ಹೊಳ್ಳ ಸರಿಗಮಪ ಚಾಂಪಿಯನ್, ಹನುಮಂತಪ್ಪ ರನ್ನರ್ ಅಪ್
ಭಾನುವಾರ, 24 ಫೆಬ್ರವರಿ 2019 (08:35 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಸರಿಗಮಪದಲ್ಲಿ ಮಂಗಳೂರಿನ ಕೀರ್ತನ್ ಹೊಳ್ಳ ವಿಜೇತರಾಗಿದ್ದಾರೆ.
ಶಾಸ್ತ್ರೀಯ ಸಂಗೀತದ ಹಿನ್ನಲೆಯಿಂದ ಬಂದಿದ್ದ ಕೀರ್ತನ್ ಹೊಳ್ಳ ವೀಕ್ಷಕರ ಅತೀ ಹೆಚ್ಚು ಮತಗಳು ಮತ್ತು ನಿರ್ಣಾಯಕರ ಅಂಕಗಳನ್ನು ಪಡೆದು ವಿಜೇತರಾಗಿದ್ದಾರೆ.
ಇನ್ನು, ಜನಪದ ಹಾಡುಗಳ ಮೂಲಕ ರಾಜ್ಯಾಂದ್ಯಂತ ಮನೆ ಮಾತಾಗಿದ್ದ ಹನುಮಂತಪ್ಪ ರನ್ನರ್ ಅಪ್ ಆಗಿದ್ದಾರೆ. ಅಂತಿಮ ಸುತ್ತಿಗೆ ಕೀರ್ತನ್ ಹೊಳ್ಳ, ಹನುಮಂತಪ್ಪ ಮತ್ತು ಸಾಧ್ವಿನಿ ಆಯ್ಕೆಯಾಗಿದ್ದರು. ಈ ಪೈಕಿ ಸಾಧ‍್ವಿನಿ ಮೂರನೇ ಸ್ಥಾನ ಪಡೆದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ