’ಸೈರಾಟ್’ ರೀಮೇಕ್ ಚಿತ್ರಕ್ಕೆ ಕನ್ನಡ ಟೈಟಲ್ ಏನ್ ಗೊತ್ತಾ?

ಸೋಮವಾರ, 2 ಜನವರಿ 2017 (11:24 IST)
ಮಾರಾಠಿ ಚಿತ್ರೋದ್ಯಮದಲ್ಲಿ ಹೊದ ಸಂಚಲನ ಮೂಡಿಸಿದ ಚಿತ್ರ ಸೈರಾಟ್. ಮಾರಾಠಿ ಚಿತ್ರರಂಗದ ದಾಖಲೆಗಳನ್ನು ಅಳಿಸಿಹಾಕಿದ ಸಿನಿಮಾ. ಕೇವಲ ಹತ್ತು ತಿಂಗಳಲ್ಲಿ ನೂರು ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್ ಚಿತ್ರಗಳಿಗೆ ಸೆಡ್ಡುಹೊಡೆದಿದೆ. ಇದೀಗ ಈ ಸಿನಿಮಾವನ್ನು ಕನ್ನಡಕ್ಕೆ ತರಲಾಗುತ್ತಿದೆ. 
 
ಮೂಲ ಚಿತ್ರದಲ್ಲಿ ಅಭಿನಯಿಸಿರುವ ರಿಂಕು ರಾಜಗುರು ಕನ್ನಡದಲ್ಲೂ ಅಭಿನಯಿಸುತ್ತಿದ್ದಾರೆ. ಕಲಾ ಸಾಮ್ರಾಟ್ ಎಸ್ ನಾರಾಯಣ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. ಕನ್ನಡ ಚಿತ್ರಕ್ಕೆ ಶೀರ್ಷಿಕೆ ಫೈನಲ್ ಆಗಿದ್ದು ’ಮನಸು ಮಲ್ಲಿಗೆ’ ಎಂದಿಡಲಾಗಿದೆ.
 
ರಾಕ್ ಲೈನ್ ಪ್ರೊಡಕ್ಷನ್ಸ್ ಜೊತೆಗೆ ಜೀ ಸ್ಟುಡಿಯೋಸ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಮನೋಹರ್ ಜೋಶಿ ಕ್ಯಾಮೆರಾ ಹಿಡಿರುವ ಚಿತ್ರ. ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೂ ಹೋಗಿರುವ ಸೈರಾಟ್ ಕನ್ನಡದಲ್ಲಿ ಏನೆಲ್ಲಾ ಮೋಡಿ ಮಾಡುತ್ತೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ