ಅಡ್ವಾನ್ಸ್ ಬುಕಿಂಗ್ ನಲ್ಲಿ ‘ಡಂಕಿ’ ಹಿಂದಿಕ್ಕಿದ ಸಲಾರ್
 
ಈ ಎರಡೂ ಸಿನಿಮಾಗಳ ನಡುವೆ ಅಡ್ವಾನ್ಸ್ ಬುಕಿಂಗ್ ವಿಚಾರದಲ್ಲಿ ಭಾರೀ ಪೈಪೋಟಿಯಿದೆ. ಮೂಲಗಳ ಪ್ರಕಾರ ಸಲಾರ್ ಸಿನಿಮಾ ಬುಕಿಂಗ್ ಡಂಕಿಯನ್ನೂ ಹಿಂದಿಕ್ಕಿದೆ ಎನ್ನಲಾಗಿದೆ.
									
				ಸಲಾರ್ ಸಿನಿಮಾ ಬಹುಭಾಷೆಗಳಲ್ಲಿ ಈಗಾಗಲೇ 1,53,705 ಟಿಕೆಟ್ ಮಾರಾಟವಾಗಿದೆ. ಅತ್ತ ಡಂಕಿ ಸಿನಿಮಾ 1,44,830 ಟಿಕೆಟ್ ಗಳು ಮಾರಾಟವಾಗಿದೆ.  ಈ ಮೂಲಕ ಅಡ್ವಾನ್ಸ್ ಬುಕಿಂಗ್ ನಲ್ಲಿ ಡಂಕಿಯನ್ನು ಸಲಾರ್ ಹಿಂದಿಕ್ಕಿದೆ.
									
				ಮೊದಲ ದಿನದ ಗಳಿಕೆ ವಿಚಾರದಲ್ಲಿ ಎರಡೂ ಸಿನಿಮಾಗಳೂ ಪೈಪೋಟಿಗೆ ಬಿದ್ದಿದೆ. ಯಾವ ಸಿನಿಮಾ ಮೊದಲ ಹೆಚ್ಚು ಗಳಿಕೆ ಮಾಡಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.