ಸಲಾರ್ ರಿಲೀಸ್ ಡೇಟ್ ಪ್ರಕಟಿಸಿದ ಹೊಂಬಾಳೆ ಫಿಲಂಸ್
ಪ್ರಭಾಸ್ ನಾಯಕರಾಗಿರುವ ಸಲಾರ್ ಸಿನಿಮಾ 2023 ರ ಸೆಪ್ಟೆಂಬರ್ 28 ಕ್ಕೆ ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕೆಜಿಎಫ್ ಬಳಿಕ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದೆ.
ಸಿನಿಮಾ ಅರ್ಧಭಾಗವಷ್ಟೇ ಚಿತ್ರೀಕರಣವಾಗಿದೆ. ಉಳಿದ ಭಾಗದ ಚಿತ್ರೀಕರಣ ಮುಗಿಯಲು ಇನ್ನೂ ಆರು ತಿಂಗಳು ಬೇಕಾಗಬಹುದು ಎನ್ನಲಾಗಿದೆ. ಹೀಗಾಗಿ ಇದಾದ ಬಳಿಕವಷ್ಟೇ ಪ್ರಶಾಂತ್ ನೀಲ್ ಜ್ಯೂ.ಎನ್ ಟಿಆರ್ ಜೊತೆಗೆ ಮುಂದಿನ ಸಿನಿಮಾ ನಿರ್ದೇಶನಕ್ಕಿಳಿಯಲಿದ್ದಾರೆ ಎನ್ನಲಾಗಿದೆ.