ಬಿಡುಗಡೆಗೂ ಲಕ್ಕಿ ಮ್ಯಾನ್ ಸಿನಿಮಾಗೆ ಬೇಡಿಕೆ: ಎಲ್ಲಾ ಪುನೀತ್ ಕೃಪೆ!

ಸೋಮವಾರ, 15 ಆಗಸ್ಟ್ 2022 (09:00 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಏಕೈಕ ಕಾರಣಕ್ಕೆ ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ‘ಲಕ್ಕಿಮ್ಯಾನ್’ ಸಿನಿಮಾಗೆ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ.

ಈ ಸಿನಿಮಾದಲ್ಲಿ ದೇವರ ರೂಪದಲ್ಲಿ ಪುನೀತ್ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಪುನೀತ್ ಅಭಿನಯದ ಕೊನೆಯ ಕಮರ್ಷಿಯಲ್ ಸಿನಿಮಾ ಇದು ಎಂಬ ಹೆಗ್ಗಳಿಕೆಯಿದೆ. ಹೀಗಾಗಿ ಸಿನಿಮಾಗೆ ಭಾರೀ ಬೇಡಿಕೆ ಬಂದಿದೆ.

ಲಕ್ಕಿ ಮ್ಯಾನ್ ಸಿನಿಮಾದ ವಿತರಣೆ ಹಕ್ಕು ಒಂದೇ ದಿನ ಸೋಲ್ಡ್ ಔಟ್ ಆಗಿರುವುದು ಇದಕ್ಕೆ ಸಾಕ್ಷಿ. ನಾಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾದಲ್ಲಿ ಪುನೀತ್ ಮತ್ತು ಡ್ಯಾನ್ಸಿಂಗ್ ಪ್ರತಿಭೆ ಪ್ರಭುದೇವ ಒಂದು ಹಾಡಿನಲ್ಲಿ ಜೊತೆಯಾಗಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಇದನ್ನು ನೋಡಲೆಂದೇ ಪುನೀತ್ ಅಭಿಮಾನಿಗಳು ಥಿಯೇಟರ್ ಗೆ ಲಗ್ಗೆಯಿಡುವುದು ಗ್ಯಾರಂಟಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ