ಬಾಲಿವುಡ್ ನಟಿ ದಿಶಾ ಪಟಾನಿ ಜೊತೆ ಸಲ್ಮಾನ್ ಖಾನ್ ರೋಮ್ಯಾನ್ಸ್

ಬುಧವಾರ, 30 ಸೆಪ್ಟಂಬರ್ 2020 (17:46 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿ ದಿಶಾ ಪಟಾನಿ ಜೊತೆ ರೋಮ್ಯಾನ್ಸ್ ನಡೆಸಲಿದ್ದಾರೆ.

ಅಂದ್ಹಾಗೆ ಈ ರೋಮ್ಯಾನ್ಸ್ ನಡೆಯುವುದು ಪ್ರಭುದೇವ ಅವರೊಂದಿಗೆ ಸಲ್ಮಾನ್ ಖಾನ್ ನಟಿಸುತ್ತಿರುವ ಮುಂಬರುವ ರಾಧೆ ಚಿತ್ರದಲ್ಲಿ.

ರಾಧೆ ಚಿತ್ರದ ಚಿತ್ರೀಕರಣ ಅಕ್ಟೋಬರ್ 2 ರಂದು ಪುನರಾರಂಭಗೊಳ್ಳಲಿದೆ. ಚಿತ್ರದ ಪ್ರಮುಖ ಭಾಗಗಳನ್ನು ಕರ್ಜಾತ್‌ನಲ್ಲಿ ಚಿತ್ರೀಕರಿಸಲಾಗುತ್ತದೆ.

ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಾಧೆ ಒಂದಾಗಿದೆ. ಕೊರೊನಾ ವೈರಸ್, ಲಾಕ್ ಡೌನ್ ನ ಬಳಿಕ ಸುಮಾರು ಏಳು ತಿಂಗಳ ನಂತರ ಸಲ್ಮಾನ್ ಖಾನ್ ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರದ ಸೆಟ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಧೆ ಚಿತ್ರ ಸಂಪೂರ್ಣ ಆಕ್ಷನ್ ಎಂಟರ್‌ಟೈನರ್ ಎಂದು ಹೆಸರಾಗಿದೆ.

ದಿಶಾ ಪಟಾನಿ, ಜಾಕಿ ಶ್ರಾಫ್, ಮೇಘಾ ಆಕಾಶ್ ಮತ್ತು ಜರೀನಾ ವಹಾಬ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ