ರಶ್ಮಿಕಾ ಜೊತೆ ನಟಿಸುವ ಆಫರ್ ತಿರಸ್ಕರಿಸಿದ ಸಮಂತಾ: ಕಾರಣವೇನು?

ಶನಿವಾರ, 11 ಜೂನ್ 2022 (08:40 IST)
ಹೈದರಾಬಾದ್: ಟಾಲಿವುಡ್ ನ ಮೋಸ್ಟ್ ವಾಂಟೆಡ್ ನಟಿಯರಲ್ಲಿ ಸಮಂತಾ ಋತು ಪ್ರಭು ಮತ್ತು ರಶ್ಮಿಕಾ ಮಂದಣ್ಣ ಕೂಡಾ ಒಬ್ಬರು. ಇಬ್ಬರೂ ಆಫ್ ಸ್ಕ್ರೀನ್ ನಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಆದರೆ ತೆರೆ ಮೇಲೆ ರಶ್ಮಿಕಾ ಜೊತೆ ನಟಿಸುವ ಆಫರ್ ಒಂದನ್ನು ಸಮಂತಾ ತಿರಸ್ಕರಿಸಿದ್ದಾರಂತೆ. ಇದಕ್ಕೆ ಕಾರಣ ಅವರ ಈ ಹಿಂದಿನ ಸಿನಿಮಾ.

ಸಮಂತಾ ಇತ್ತೀಚೆಗಷ್ಟೇ ವಿಜಯ್ ಸೇತುಪತಿ ನಾಯಕರಾಗಿರುವ ಸಿನಿಮಾದಲ್ಲಿ ನಯನತಾರಾ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಆದರೆ ಈ ಸಿನಿಮಾ ಅಷ್ಟೇನೂ ಹಿಟ್ ಆಗಿರಲಿಲ್ಲ. ಇದಾದ ಬಳಿಕ ಸಮಂತಾ ಇನ್ಮುಂದೆ ಮಲ್ಟಿ ಹೀರೋಯಿನ್ ಸಿನಿಮಾ ಮಾಡುವುದು ಬೇಡ ಎಂದು ತೀರ್ಮಾನಿಸಿದ್ದಾರಂತೆ. ಹೀಗಾಗಿ ರಶ್ಮಿಕಾ ಜೊತೆಗಿನ ಆಫರ್ ತಿರಸ್ಕರಿಸಿದ್ದಾರೆ ಎಂದು ಗಾಸಿಪ್ ಹರಿದಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ