ಸಿನಿಮಾ ರಂಗದಲ್ಲಿ ನಟ ನಟಿಯರ ನಡುವಿನ ತಾರತಮ್ಯದ ಬಗ್ಗೆ ಮಾತನಾಡಿದ ಸಮಂತಾ

ಮಂಗಳವಾರ, 28 ಜುಲೈ 2020 (12:08 IST)
Normal 0 false false false EN-US X-NONE X-NONE

ಹೈದರಾಬಾದ್ :  ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಟಾಲಿವುಡ್ ನಲ್ಲಿ ನಟ ನಟಿಯರ ನಡುವಿನ ಇರುವ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ.
 


ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಫ್ಲಾಪ್ ಸಿನಿಮಾ ಕೊಟ್ಟರೂ ಹೀರೋಗಳಿಗೆ ಯಾವುದೇ ಸಮಸ್ಯೆ ಆಗೋದಿಲ್ಲ. ಆದರೆ  ಹಿರೋಯಿನ್ಸ್ ಎರಡು ಮೂರು ಸಿನಿಮಾಗಳು ಫ್ಲಾಪ್ ಆದರೆ ಸಾಕು ಅವರ ಸಿನಿ ಕೆರಿಯರ್ ನಾಶವಾಗುತ್ತದೆ. ನಾಯಕಿ ಆಧಾರಿತ ಚಿತ್ರಗಳನ್ನು ಪ್ರೇಕ್ಷಕರು ನೋಡುವುದಿಲ್ಲ. ಆದರೆ ಒಬ್ಬ ಸ್ಟಾರ್ ಸುಮ್ಮನೇ ಒಂದು ಸ್ಟೈಲಿಶ್ ವಾಕ್ ಮಾಡಿದರೇ ಸಾಕು ಸಿನಿಮಾ ಹಿಟ್ ಆಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸ್ಟಾರ್ ಹೀರೋಗೆ ಇರುವ ಇಮೇಜ್ ನಲ್ಲಿ ಒಂದು ಪರ್ಸೆಂಟ್ ಕೂಡ ಹೀರೋಯಿನ್ ಗೆ ಸಿಗಲ್ಲ. ಅನುಷ್ಕಾ ತರಹದ ನಾಯಕಿಯರೇ ಸಾಕಷ್ಟು ಶ್ರಮಿಸುತ್ತಿದ್ದಾರೆ. ನಾವು ಎಷ್ಟೇ ಕಷ್ಟಪಟ್ಟರೂ ಹೀರೋಗಳಿಗೆ ಸಮವಾಗಿ ಬೆಳೆಯಲು ಸಾಧ್ಯವೇ ಇಲ್ಲ. ನಾಯಕ ನಾಯಕಿಯರ ಸಂಭಾವನೆ ಆಕಾಶ, ಭೂಮಿಗೆ ಇರುವ ವ್ಯತ್ಯಾಸ, ಅವರಿಗೆ ಕೋಟಿಗಟ್ಟಲೇ ಸಂಭಾವನೆ, ನಮಗೆ ಅದರಲ್ಲಿ ಶೇ.20 ನೀಡಲು ಅಳುತ್ತಾರೆ ಎಂದು ಅವರು ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ