ರೋಡೀಸ್ ಆಡಿಶನ್ನಿನಲ್ಲಿ ಮಿಂಚು ಹರಿಸಿದ ಕನ್ನಡತಿ ಸಂಯುಕ್ತಾ ಹೆಗ್ಡೆ

ಸೋಮವಾರ, 27 ಫೆಬ್ರವರಿ 2017 (11:53 IST)
ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಕನ್ನಡತಿ ಸಂಯುಕ್ತಾ ಹೆಗ್ಡೆ ಇತ್ತೀಚೆಗೆ ಪುನೆಯಲ್ಲಿ ಖಾಸಗಿ ಚಾನಲ್`ನ ರೋಡೀಸ್ ರಿಯಾಲಿಟಿ ಶೋನಲ್ಲಿ ಮಿಂಚು ಹರಿಸಿದ್ದಾರೆ. ಸ್ಪರ್ಧಾರ್ಥಿಗಲ್ಲಿ ಅತ್ಯಂತ ಕಿರಿಯವಳಾದ ಸಂಯುಕ್ತಾ ಹೆಗ್ಡೆ ಹರ್ಭಜನ್ ಸಿಂಗ್, ನೇಹಾ ಧೂಪಿಯಾ, ರಣವಿಜಯ್ ಸಿಂಘಾ, ಕರಣ್ ಕುಂದ್ರಾ, ಪ್ರಿನ್ಸ್ ನೆರುಲಾ ಅವರ ಮುಂದೆ ತನ್ನ ಪ್ರತಿಭಾ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.


12 ವಿಧಧ ಡ್ಯಾನ್ಸ್ ಕಲಿತಿದ್ದೇನೆಂದ ಸಂಯುಕ್ತಾಗೆ ನೇಹಾ ಧೂಪಿಯಾ ಅದರಲ್ಲಿ 4 ಡ್ಯಾನ್ಸ್`ಗಳನ್ನ ಮಾಡಿ ತೋರಿಸು ಎಂದು ಚಾಲೆಂಜ್ ಮಾಡಿದರು.  ಚಾಲೆಂಜ್ ಸ್ವಿಕರಿಸಿದ ಸಂಯುಕ್ತಾ ಗಿಲ್ಹೇರಿಯನ್, ಪಿಂಗಾ, ಬೆಲ್ಲಿ ಸೇರಿದಂತೆ ತಮ್ಮ ನೃತ್ಯ ಪ್ರಾವಿಣ್ಯವನ್ನ ಪ್ರದರ್ಶಿಸಿದ್ದಾರೆ. ಸಂಯುಕ್ತಾಳ ಟ್ಯಾಲೆಂಟ್ ಕಂಡು ನಿಬ್ಬೆರಗಾದ ನೇಹಾ, ಇದಕ್ಕೂ ನಿಜಕ್ಕೂ ಅದ್ಬುತ, ನಿನ್ನ ಸೌದರ್ಯದ ಜೊತೆ ನಿನ್ನ ನೃತ್ಯಭಂಗಿಗಳೂ ಸೊಗಸಾಗಿದ್ದವು ಎಂದು ಹಾಡಿ ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ