ಸಂಚಾರಿ ವಿಜಯ್ ಬಗ್ಗೆ ಅಪಪ್ರಚಾರ: ಸಹೋದರನ ಸ್ಪಷ್ಟನೆ
ಆದರೆ ಈ ಬಗ್ಗೆ ವಿಜಯ್ ಸಹೋದರ ವಿರೂಪಾಕ್ಷ ಸ್ಪಷ್ಟನೆ ನೀಡಿದ್ದು ನಮ್ಮ ಇಡೀ ಊರು ನಮ್ಮನ್ನು, ನಮ್ಮ ತಂದೆ-ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ನಮಗಾಗಲೀ, ನಮ್ಮ ಕುಟುಂಬಕ್ಕಾಗಲೀ ಯಾವುದೇ ಜಾತಿ ನಿಂದನೆಯಾಗಿಲ್ಲ. ಇಂತಹ ಸುದ್ದಿಯಿಂದ ಪಂಚನಹಳ್ಳಿ ಗ್ರಾಮಸ್ಥರಿಗೆ ನೋವಾಗಿದ್ದರೆ ಕ್ಷಮೆಯಿರಲಿ. ಇಂತಹ ಸುದ್ದಿಗಳು ಹೇಗೆ ಹರಡುತ್ತವೋ ಗೊತ್ತಿಲ್ಲ ಎಂದು ವಿರೂಪಾಕ್ಷ ಸ್ಪಷ್ಟನೆ ನೀಡಿದ್ದಾರೆ.