ಆರನೇ ಮೈಲಿಯಲ್ಲಿ ನಟ ಸಂಚಾರಿ ವಿಜಯ್

ಶುಕ್ರವಾರ, 24 ಫೆಬ್ರವರಿ 2017 (18:06 IST)
ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಚಿತ್ರ 6ನೇ ಮೈಲಿ. ಈ ಚಿತ್ರಕ್ಕೆ ಸೀನಿ (ಶ್ರೀನಿವಾಸ್) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೊಂದು ವಿಶೇಷ ಎಂದರೆ ಈ ಚಿತ್ರದಲ್ಲಿ ಇಬ್ಬರು ರೇಡಿಯೋ ಜಾಕಿಗಳು ಆರ್ ಜೆ ನೇತ್ರಾ ಮತ್ತು ಆರ್ ಜೆ ಸುದೇಶ್ ಒಟ್ಟಿಗೆ ಬಣ್ಣಹಚ್ಚುತ್ತಿದ್ದಾರೆ. 
 
ಅಂದಹಾಗೆ ಇದೊಂದು ಕ್ರೈಮ್ ಥ್ರಿಲ್ಲರ್. ಮೂರು ಹಂತದ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಬೆಂಗಳೂರು, ಶಿರಸಿ, ಪಶ್ಚಿಮ ಘಟ್ಟಗಳು, ಯಲ್ಲಾಪುರದಲ್ಲಿ ಚಿತ್ರೀಕರಣ ನಡೆಯಲಿದೆ. ಕೇರಳದಲ್ಲೂ ಒಂದೆರಡು ದಿನ ಚಿತ್ರೀಕರಣ ನಡೆಸಲಿದ್ದಾರೆ. 
 
ಡಾ.ಜಿ.ಎಸ್. ಶೈಲೇಶ್ ಕುಮಾರ್ ನಿರ್ಮಿಸುತ್ತಿರುವ ಚಿತ್ರಕ್ಕೆ ಸಾಯಿಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಥ್ರಿಲ್ಲರ್ ಕಥೆಯಾದ್ದರಿಂದ ಹಿನ್ನೆಲೆ ಸಂಗೀತ ನಿರ್ಣಾಯಕ ಪಾತ್ರವಹಿಸುತ್ತದೆ ಎನ್ನುತ್ತಾರೆ ಅವರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ