ದರ್ಶನ್ ಫ್ಯಾನ್ಸ್‌ ವಿಚಾರದಿಂದ ನನ್ನ ಹೆಂಡ್ತಿ ಸಂಬಂಧ ಹಾಳಾಗಿದೆ: ಪ್ರಥಮ್ ಆಕ್ರೋಶ

Sampriya

ಬುಧವಾರ, 30 ಜುಲೈ 2025 (16:42 IST)
ಬೆಂಗಳೂರು: ನಾವು ಯಾರ ವಿರೋಧಿಗಳಲ್ಲ. ದರ್ಶನ್ ಅವರ ಫ್ಯಾನ್ಸ್‌ಗೆ ಬುದ್ದಿ ಹೇಳಲಿ. ಈ ವಿಚಾರದಿಂದ ನನ್ನ ಹಾಗೂ ಪತ್ನಿ ಸಂಬಂಧ ಹಾಳಾಗಿದೆ ಎಂದು ಪ್ರಥಮ್ ಹೇಳಿದರು. 

ಇಂದು ಡಿಜಿಪಿಯನ್ನು ಭೇಟಿಯಾಗಲು ಬಂದ ಪ್ರಥಮ್ ಮಾಧ್ಯಮದ ಮುಂದೆ ಮತ್ತೇ ಡಿ ಫ್ಯಾನ್ಸ್ ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು. 

ದರ್ಶನ್ ಅವರಿಗೆ ಬಿಸಿ ಮುಟ್ಟಿಸಬೇಕೆಂಬುದಾಗಿ ನಿನ್ನೆಯಿಂದ ಅನ್ನ, ನೀರು ಮುಟ್ಟದೆ ಉಪವಾಸವನ್ನು ಮಾಡುತ್ತಿದ್ದೇನೆ. 2 ಸಾವಿರ ಪೇಜ್‌ಗಳಲ್ಲಿ ನನ್ನನ್ನು ಟ್ರೋಲ್ ಮಾಡಲಾಗಿದೆ. ಹಲ್ಲೆ ಯತ್ನಗಳು ನಡೆದರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. 

ನನ್ನ ಬೇಡಿಕೆಯಿರುವುದು ಅಶ್ಲೀಲವಾಗಿ ಟ್ರೋಲ್ ಮಾಡುತ್ತಿರುವ ಪೇಜ್‌ಗಳನ್ನು ಡಿಲೀಟ್ ಮಾಡಬೇಕೆಂಬುದೆ  ನನ್ನ ಬೇಡಿಕೆ. ಬೇರೆನಿಲ್ಲ. ನನ್ನ ಪ್ರಾಣ ಕಾಪಾಡಿಕೊಳ್ಳಲು ಇದೀಗ ಠಾಣೆಯಲ್ಲಿ ಕೂತಿದ್ದೇನೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ