ಕನ್ನಡ ಕಲಿಸೋದಕ್ಕೆ ಬರುತ್ತಿದ್ದಾರೆ ಸಂಚಿತಾ ಶೆಟ್ಟಿ

ಮಂಗಳವಾರ, 26 ಜುಲೈ 2016 (14:03 IST)
ಅಂದ್ಹಾಗೆ ಸದ್ಯ ಕನ್ನಡದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿ ಹಾಕಿರುವ ಸಿನಿಮಾ ಅಂದ್ರೆ ಅದು ಬದ್ಮಾಶ್ .ರಾಟೆ ಧನಂಜಯ್ ಹಾಗೂ ಸಂಚಿತಾ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಅಭಿಮಾನಿಗಳಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿದೆ.ಈ ಸಿನಿಮಾದಲ್ಲಿ ಸಂಚಿತಾ ಅವರದ್ದು ವಿಭಿನ್ನವಾದ ಪಾತ್ರವಂತೆ.

 
 ಹೌದು,,, ಈ ಸಿನಿಮಾದಂತೆ ಸಂಚಿತಾ ಅವರು ಆರ್ ಜೆ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ಬಗ್ಗೆ ಅತೀವ ಪ್ರೀತಿ ಇರುವಂತಹ ಒಬ್ಬ ರೇಡಿಯೋ ಜಾಕಿಯಂತೆ ಸಂಚಿತಾ. ಕನ್ನಡ ಗೊತ್ತಿಲ್ಲದ ಮಂದಿಗೆ ದಿನ ಪೂರ್ತಿ ಕನ್ನಡ ಕಲಿಸುವಂತಹ ಕೆಲಸವನ್ನು ಮಾಡುವ ಆರ್ ಜೆಯ ಪಾತ್ರವಂತೆ. 
 
ಹಾಗಾಗಿ ಸಂಚಿತಾ ಹೇಗೆ ಕನ್ನಡ ಕಲಿಸ್ತಾರೆ ಅಂತಾ ನೋಡೋದಕ್ಕೆ ಅಭಿಮಾನಿಗಳು ಕಾತುರದಲ್ಲಿದ್ದಾರೆ.ಅಂದ್ಹಾಗೆ ಸಿನಿಮಾದ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಅವರಿಗೆ  ಇಂತಹದ್ದೊಂದು ಸಿನಿಮಾ ಮಾಡಬೇಕು ಅನ್ನೋ ಆಸೆ ಬಹು ದಿನಗಳಿಂದಲೇ ಇತ್ತಂತೆ. ಅದರಲ್ಲೂ ಬೆಂಗಳೂರಿನ ರೇಡಿಯೋ ಕಾರ್ಯಕ್ರಮಗಳ ಬಗ್ಗೆ ಸಿನಿಮಾ ಮಾಡಬೇಕು ಅನ್ನೋದು ಅವರು ಬಹು ದೊಡ್ಡ ಆಸೆಯಾಗಿತ್ತಂತೆ.
 
ಸಿನಿಮಾದಲ್ಲಿ ಧನಂಜಯ್ ಅವರದ್ದು ಕೂಡ ವಿಭಿನ್ನವಾದ ಪಾತ್ರವಂತೆ. ಇನ್ನು ಸಂಚಿತಾ ಅವರು ಸಿನಿಮಾದಲ್ಲಿ ಪ್ರಿಯಾ ಅನ್ನೋ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಕನ್ನಡ ಬಾರದ ಪ್ರತಿಯೊಬ್ಬ ಪರಭಾಷಿಗರಿಗೆ ಕನ್ನಡವನ್ನು ಕಲಿಸುವಂತಹ ಆರ್ ಜೆಯಾಗಿ ಸಂಚಿತಾ ಸಿನಿಮಾದಲ್ಲಿ ಮಿಂಚಿದ್ದಾರಂತೆ. ಸಿನಿಮಾದಲ್ಲಿ ಸಂಚಿತಾ ಕಮಾಲ್ ಹೇಗಿರುತ್ತೆ ಅನ್ನೋದು ಸಿನಿಮಾ ರಿಲೀಸ್ ಆದ ಮೇಲೆ ಗೊತ್ತಾಗಬೇಕಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ