Lasya Nagaraj: ನಟಿ ಲಾಸ್ಯಾ ನಾಗರಾಜ್ ತಾಯಿ ಮೇಲೆ ತಂಗಿಯಿಂದಲೇ ಹಲ್ಲೆ video viral
ಮಂಗಳವಾರ ರಜಾ ದಿನ, ಲೈಫ್ ಈಸ್ ಬ್ಯೂಟಿಫುಲ್ ನಂತಹ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಲಾಸ್ಯಾ ನಾಗರಾಜ್ ತಾಯಿ ಸುಧಾ ನಾಗರಾಜ್ ಮೇಲೆ ಸಹೋದರಿಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸುಧಾ ನಾಗರಾಜ್ ಮತ್ತು ಅವರ ಸಹೋದರಿ ಮಂಗಳಾ ಶಶಿಧರ್ ಒಂದೇ ಕಟ್ಟಡದಲ್ಲಿ ವಾಸವಾಗಿದ್ದರು. ಸುಧಾ ನೃತ್ಯ ಕ್ಲಾಸ್ ಒಂದನ್ನು ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಸಹೋದರಿಯರ ನಡುವೆ ವೈಮನಸ್ಯವಿತ್ತು ಎನ್ನಲಾಗಿದೆ.
ಇದೇ ಈಗ ತಾರಕಕ್ಕೇರಿ ಸುಧಾ ಮೇಲೆ ಮಂಗಳಾ ಮತ್ತು ಪತಿ ಶಶಿಧರ್ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಸದ್ಯಕ್ಕೆ ಲಾಸ್ಯಾ ಕೆನಡಾದಲ್ಲಿದ್ದಾರೆ ಎನ್ನಲಾಗಿದೆ. ವಿಡಿಯೋ ವೈರಲ್ ಆಗಿರುವ ಹಿನ್ನಲೆಯಲ್ಲಿ ಪೊಲೀಸರೇ ಸ್ವಯಂಪ್ರೇರಿತರಾಗಿ ತನಿಖೆ ನಡೆಸುವ ಸಾಧ್ಯತೆಯಿದೆ.