ರವಿಚಂದ್ರನ್ ಪುತ್ರ ಮನೋರಂಜನ್ ಮದುವೆಗೆ ಬಂದ ಗಣ್ಯರು ಯಾರೆಲ್ಲಾ?
ಈ ವಿವಾಹ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನ ಅನೇಕ ತಾರೆಯರು ಆಗಮಿಸಿ ಶುಭ ಕೋರಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಸ್ಯಾಂಡಲ್ ವುಡ್ ನಲ್ಲಿ ಸ್ನೇಹಿತರ ವಲಯ ದೊಡ್ಡದು. ಹೀಗಾಗಿ ಇಡೀ ಸ್ಯಾಂಡಲ್ ವುಡ್ ಮದುವೆಗೆ ಸಾಕ್ಷಿಯಾಯಿತು.
ಅವರಲ್ಲಿ ಪ್ರಮುಖವಾಗಿ ನಟ ಶಿವರಾಜ್ ಕುಮಾರ್, ತಾರಾ ಅನುರಾಧ, ಉಮಾಶ್ರೀ, ಅಕುಲ್ ಬಾಲಾಜಿ, ಮಾಸ್ಟರ್ ಆನಂದ್, ಶರಣ್, ಸಂಗೀತ ನಿರ್ದೇಶಕ ಹಂಸಲೇಖಾ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ನೂತನ ಜೋಡಿಗೆ ಶುಭ ಕೋರಿದ್ದಾರೆ.