ಕೆಜಿಎಫ್ 2 ಟಿವಿಯಲ್ಲಿ ಇಂದು

ಶನಿವಾರ, 20 ಆಗಸ್ಟ್ 2022 (08:20 IST)
ಬೆಂಗಳೂರು: ಥಿಯೇಟರ್ ಗಳಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಚಿನ್ನದ ನಾಡಿನ ಕತೆಯಿರುವ ಕೆಜಿಎಫ್ 2 ಸಿನಿಮಾ ಇಂದು ಟಿವಿಯಲ್ಲಿ ಪ್ರಸಾರವಾಗಲಿದೆ.

ಜೀ ಕನ್ನಡ ವಾಹಿನಿಯಲ್ಲಿ ಇಂದು ಸಂಜೆ 7 ಗಂಟೆಗೆ ಕೆಜಿಎಫ್ 2 ಸಿನಿಮಾ ಪ್ರಸಾರವಾಗಲಿದೆ. ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಸಿನಿಮಾ ಪ್ರಸಾರವಾಗುತ್ತಿದೆ.

ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಈಗಾಗಲೇ 1250 ಕೋಟಿ ರೂ.ಗೂ ಅಧಿಕ ಬಾಚಿ ದಾಖಲೆ ಮಾಡಿತ್ತು. ಕನ್ನಡ ಸಿನಿಮಾದ ಹೆಮ್ಮೆ ಕೆಜಿಎಫ್ 2 ಟಿವಿಯಲ್ಲಿ ನೋಡಲು ಇಂದು ಸಿದ್ಧರಾಗಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ