ಸ್ಯಾಂಡಲ್ ವುಡ್ ನಲ್ಲಿ ಇದೀಗ ಡ್ರಗ್ಸ್ ಮಾಫಿಯಾದ ಜಾಲವು ಕೆಲವು ನಟ, ನಟಿಯರನ್ನು ಥಳಕು ಹಾಕಿಕೊಂಡಿದೆ.
ಪ್ರಮುಖವಾಗಿ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಶರ್ಮಿಳಾ ಮಾಂಡ್ರೆ ಇವರ ಆಪ್ತರ ಹೆಸರು ಕೇಳಿಬರತೊಡಗಿದೆ.
ಈ ನಡುವೆ ವಿಚಾರಣೆಗೆ ಹಾಜರಾಗುವಂತೆ ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ನೋಟಿಸ್ ನೀಡಿದೆ.
ಆದರೂ ನಾನು ವಿಚಾರಣೆಗೆ ಹಾಜರಾಗುತ್ತಿಲ್ಲ. ನನ್ನ ವಕೀಲರ ಮೂಲಕ ಪೊಲೀಸರಿಗೆ ಈ ವಿಷಯ ತಿಳಿಸಿದ್ದೇನೆ ಎಂದು ನಟಿ ರಾಗಿಣಿ ಹೇಳಿದ್ದಾರೆ.