ಹುಷಾರಿಲ್ಲ, ವಿಚಾರಣೆಗೆ ಕಾಲಾವಕಾಶ ಕೊಡಿ: ನಟಿ ರಾಗಿಣಿ ಮನವಿ

ಗುರುವಾರ, 3 ಸೆಪ್ಟಂಬರ್ 2020 (11:11 IST)
ಬೆಂಗಳೂರು: ಡ್ರಗ್ ಮಾಫಿಯಾ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ ಬೆನ್ನಲ್ಲೇ ವಕೀಲರ ಮೂಲಕ ನಟಿ ಕಾಲಾವಕಾಶ ಕೋರಿದ್ದಾರೆ.


ರಾಗಿಣಿ ಆಪ್ತ ರವಿಶಂಕರ್ ಅವರನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಸಂಬಂಧವಾಗಿ ರಾಗಿಣಿಗೆ ಇಂದು 10 ಗಂಟೆಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಆದರೆ ರಾಗಿಣಿ ಪರ ವಕೀಲರು ತಮ್ಮ ಕಕ್ಷಿದಾರರಿಗೆ ಹುಷಾರಿಲ್ಲ. ಅನಾರೋಗ್ಯ ಕಾರಣದಿಂದ ಅವರಿಗೆ ವಿಚಾರಣೆಗೆ ಹಾಜರಾಗಲು ಎರಡು ದಿನಗಳ ಕಾಲಾವಕಾಶ ಕೊಡಿ ಎಂದು ಕೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ