ಡ್ರಗ್ಸ್ ಕೇಸ್ : ತನ್ನ ಹೆಸರು ಹೇಳಿದವರಿಗೆ ನಾಯಿ ಎಂದ ನಟಿ ಸಂಜನಾ?

ಗುರುವಾರ, 3 ಸೆಪ್ಟಂಬರ್ 2020 (20:32 IST)

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಸದ್ದು ಮಾಡುತ್ತಿರುವಾಗಲೇ ನಟಿ ಸಂಜನಾ ತನ್ನ ಹೆಸರು ಹೇಳಿದವರ ವಿರುದ್ಧ ಕಿಡಿಕಾರಿದ್ದಾರೆ.


ನಾಯಿ ಬೊಗಳಿದರೆ ನಾವು ತಿರುಗಿ ಬೊಗಳಬಾರದು ಎಂದು ತಮ್ಮ ವಿರುದ್ಧ ಆರೋಪ ಮಾಡಿರುವ ಸಿನಿಮಾ ವಿತರಕ ಪ್ರಶಾಂತ್ ಸಂಬರಗಿ ವಿರುದ್ಧ ಹರಿಹಾಯ್ದಿದ್ಧಾರೆ.

ನನಗೆ ಚೀಪ್ ಪಬ್ಲಿಸಿಟಿ ಬೇಕಾಗಿಲ್ಲ. ಅವರು ಯಾರೆಂಬುದು ನನಗೆ ಗೊತ್ತಿಲ್ಲ. ನಾನೂ ಭೇಟಿ ಮಾಡಿಲ್ಲ ಎಂದಿದ್ದಾರೆ.

ತಾವು ಹೇಗೆ? ಏನು? ಎಂಬುದು ಸ್ಯಾಂಡಲ್ ವುಡ್ ಮಂದಿಗೆ ತಿಳಿದಿದೆ ಎಂದು ನಟಿ ಸಂಜನಾ ಹೇಳಿಕೊಂಡಿದ್ದಾರೆ.

ನಟಿ ಸಂಜನಾ ಹೆಸರು ಹೇಳಿ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲ ಎಂದು ಸಿನಿಮಾ ವಿತರಕ ಪ್ರಶಾಂತ್ ಸಂಬರಗಿ ಹೇಳಿಕೆ ನೀಡಿದ್ದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ