ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ : ಸಂಸದೆ ಸುಮಲತಾ ಹೇಳೋದೇನು?

ಮಂಗಳವಾರ, 8 ಸೆಪ್ಟಂಬರ್ 2020 (22:26 IST)
ಸ್ಯಾಂಡಲ್ ವುಡ್ ನ ಕೆಲವು ನಟ, ನಟಿಯರು ಡ್ರಗ್ಸ್ ಮಾಫಿಯಾ ಲಿಂಕ್ ಆರೋಪ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು, ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದು, ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಇಡೀ ಸಿನಿಮಾ ರಂಗವನ್ನೇ ಟಾರ್ಗೆಟ್ ಮಾಡಬಾರದು ಎಂದಿದ್ದಾರೆ.

ಡ್ರಗ್ಸ್ ಬಗ್ಗೆ ನಮ್ಮ ಅನುಭವದಲ್ಲಿ ಇಲ್ಲ. ಕೇವಲ ಸಿನಿಮಾ ರಂಗ ಮಾತ್ರ ಅಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಇದು ಇದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ