ಸಿನಿ ಪ್ರೇಮಿಗಳಿಗೆ ಇಂದು ಬಂಪರ್
ರಮೇಶ್ ಅರವಿಂದ್ ನಾಯಕರಾಗಿರುವ ಶಿವಾಜಿ ಸುರತ್ಕಲ್ ಸಿನಿಮಾದ ಎರಡನೇ ಭಾಗ ಇಂದು ಥಿಯೇಟರ್ ನಲ್ಲಿ ತೆರೆ ಕಾಣುತ್ತಿದೆ. ಶಿವಾಜಿ ಸುರತ್ಕಲ್ ಭಾಗ 1 ಭಾರೀ ಸಕ್ಸಸ್ ಕಂಡಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರದ ಸಿನಿಮಾದಲ್ಲಿ ರಮೇಶ್ ಒಬ್ಬ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ನಟ ಕೋಮಲ್ ಕುಮಾರ್ ಬಹಳ ಸಮಯದ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಉಂಡೆ ನಾಮ. ಈ ಕಾಮಿಡಿ ಎಂಟರ್ ಟೈನರ್ ಸಿನಿಮಾ ಇಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.
ಇದರ ಜೊತೆಗೆ ಒಟಿಟಿ ಪ್ರೇಕ್ಷಕರಿಗಾಗಿ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ನೂರು ಕೋಟಿ ಗಳಿಸಿದ್ದ ಸಿನಿಮಾ ಕಬ್ಜ ಬಹುಭಾಷೆಗಳಲ್ಲಿ ಇಂದು ಪ್ರಸಾರವಾಗುತ್ತಿದೆ. ಇದು ಅಮೆಝೋನ್ ಪ್ರೈಮ್ ನಲ್ಲಿ ವೀಕ್ಷಣೆಗೆ ಲಭ‍್ಯವಾಗಲಿದೆ.