ಮಾಧ್ಯಮಕ್ಕೆ ತಡೆಯಾಜ್ಞೆ ತಂದಿದ್ದಕ್ಕೆ ಸ್ಪಷ್ಟನೆ ಕೊಟ್ಟ ಸುದೀಪ್

ಬುಧವಾರ, 12 ಏಪ್ರಿಲ್ 2023 (08:58 IST)
ಬೆಂಗಳೂರು: ತಮಗೆ ಬಂದ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಮಾಧ‍್ಯಮಗಳು ಖಾಸಗಿ ವಿಡಿಯೋ ಸುದ್ದಿ ಪ್ರಸಾರ ಮಾಡಬಾರದು ಎಂದು ಕೋರ್ಟ್ ಮೂಲಕ ಕಿಚ್ಚ ಸುದೀಪ್ ತಡೆಯಾಜ್ಞೆ ತಂದಿದ್ದರು.

ಈ ಬಗ್ಗೆ ಸುದೀಪ್ ಈಗ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಗೆ ಬೆದರಿಕೆ ಪತ್ರ ಬಂದ ಬೆನ್ನಲ್ಲೇ ಕೆಲವು ಡಿಜಿಟಲ್ ಮಾಧ್ಯಮಗಳಲ್ಲಿ ಅವರ ಖಾಸಗಿ ವಿಡಿಯೋ ಕುರಿತಾಗಿ ಕಪೋಲಕಲ್ಪಿತ ಸುದ್ದಿಗಳು ಪ್ರಸಾರವಾಗಿದ್ದವು.

ಈ ಹಿನ್ನಲೆಯಲ್ಲಿ ತಮ್ಮ ವಕೀಲರ ಮೂಲಕ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸುದೀಪ್, ‘ನನ್ನ ಮಾಧ‍್ಯಮದ ನಡುವಿನ ಸಂಬಂಧ ಅವಿನಾಭಾವ ಸಂಬಂಧ. ಕೆಲವು ಕಿಡಿಗೇಡಿಗಳು ನನ್ನದಲ್ಲದ ತಿರುಚಿದ, ಜೋಡಿಸಿದ ಸುದ್ದಿ, ವಿಡಿಯೋಗಳನ್ನು ಪ್ರಸಾರ ಮಾಡುತ್ತಿರುವುದಕ್ಕೆ ಮುನ್ನೆಚ್ಚರಿಕೆಯಷ್ಟೇ. ಮಾಧ್ಯಮವೆಂದರೆ ಸಾಮಾಜಿಕ ಜಾಲತಾಣ, ಡಿಜಿಟಲ ಮಾಧ‍್ಯಮವೂ ಸೇರಿದೆ. ಅವುಗಳನ್ನು ಬಳಸಿಕೊಂಡು ದುರ್ಬಳಕೆಯಾಗದಂತೆ ಮುನ್ನೆಚ್ಚರಿಕೆಯಷ್ಟೇ. ಇದಕ್ಕೆ ತಡೆಯಾಜ್ಞೆ ತಂದಿದ್ದೇನಷ್ಟೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ. ಡಿಜಿಟಲ್ ವೇದಿಕೆಗಳ ಮೇಲೆ ನ್ಯಾಯಾಲಯ ತಡೆಯಾಜ್ಞೆ ಕೊಡದು. ಈ ಸೂಕ್ಷ್ಮ ತಮಗೂ ಗೊತ್ತಿದೆ. ಹೀಗಾಗಿ ಅನ್ಯಥಾ ಭಾವಿಸಬಾರದು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ